ADVERTISEMENT

ಮಣ್ಣಿನ ಮಡಿಕೆಗಳಿಗೆ ಹೆಚ್ಚಿದ ಬೇಡಿಕೆ

ಬಿಸಿಲಿನ ತಾಪದಿಂದ ತತ್ತರಿಸಿದ ಜನತೆ: ತಂಪು ಪಾನೀಯಗಳ ಮೊರೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 11:32 IST
Last Updated 9 ಏಪ್ರಿಲ್ 2018, 11:32 IST

ಮಸ್ಕಿ: ಬೇಸಿಗೆಯ ತಾಪದಿಂದ ತತ್ತರಿಸಿ ಹೋಗಿರುವ ಇಲ್ಲಿನ ಜನರು ತಂಪು ಪಾನೀಯ, ಹಣ್ಣಿನ ರಸದ ಮೊರೆ ಹೋಗಿದ್ದಾರೆ. ಸುಡು ಬೇಸಿಗೆಯ ದಿನಗಳಲ್ಲಿ ಬಡವರ ಪ್ರಿಡ್ಜ್‌ ಎಂದೇ ಕರೆಯುವ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಬಂದಿದೆ.

ಪಟ್ಟಣದ ಭ್ರಮರಾಂಬ ದೇವಸ್ಥಾನದ ಮುಂಭಾಗದಲ್ಲಿ ಮಣ್ಣಿನ ಮಡಿಕೆಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ನಿವಾಸಿ ಫಕೀರಪ್ಪ ಕುಂಬಾರ ಅವರು ಮಣ್ಣಿನ ಮಡಿಕೆ ಮಾರಾಟ ಮಾಡುತ್ತಿದ್ದಾರೆ. 2 ಲೀಟರ್‌ನಿಂದ 12 ಲೀಟರ್ ನೀರು ಸಂಗ್ರಹದ ಮಡಿಕೆಗಳು ಮಾರಾಟಕ್ಕಿವೆ. ₹200ರಿಂದ ₹350 ರವರೆಗೆ ಬೆಲೆ ಇದೆ ಎಂದು ಫಕೀರಪ್ಪ ಕುಂಬಾರ ಹೇಳುತ್ತಾರೆ.

‘ಕೆಂಪು ಮಣ್ಣಿನಲ್ಲಿ ಮಡಿಕೆ ತಯಾರಿಸಲಾಗುತ್ತದೆ. ಈ ಮಡಿಕೆಗಳಲ್ಲಿ ನೀರು ಇಟ್ಟರೆ ತಣ್ಣಗೆ ಇರುತ್ತದೆ.  ಹೆಚ್ಚಿನ ಜನರು ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಪ್ರತಿ ನಿತ್ಯ 20ರಿಂದ 25 ಮಡಿಕೆಗಳು ಮಾರಾಟವಾಗುತ್ತವೆ. ಕೂಡ್ಲಿಗಿಯಲ್ಲಿ ತಯಾರಿಸಲಾಗುತ್ತಿದ್ದು, ಸಾರಿಗೆ ವೆಚ್ಚ ತೆಗೆದು ಒಂದು ಮಡಿಕೆಗೆ ₹50ರಿಂದ ₹100 ಉಳಿಯುತ್ತದೆ ಎಂದು ಹೇಳಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಜನರು ಕೂಡಾ ಇಲ್ಲಿಂದ ಮಡಿಕೆ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ.

ADVERTISEMENT

-ಪ್ರಕಾಶ್ ಮಸ್ಕಿ

**

ಬೇಸಿಗೆಯ ದಿನಗಳಲ್ಲಿ ಮಣ್ಣಿನ ಮಡಿಕೆಗೆ ಬೇಡಿಕೆ ಹೆಚ್ಚು. ಊರೂರು ತಿರುಗಿ ಬದುಕು ಕಟ್ಟಿಕೊಳ್ಳುತ್ತೇವೆ – ಫಕೀರಪ್ಪ ಕುಂಬಾರ,ಮಡಿಕೆ ತಯಾರಕ, ಕೂಡ್ಲಗಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.