ADVERTISEMENT

ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಯತ್ನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:20 IST
Last Updated 20 ಜನವರಿ 2011, 8:20 IST

ಸಿಂಧನೂರು: ಜಿಲ್ಲಾ ಪಂಚಾಯಿತಿ ಆಡಳಿತ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು ಸೇರಿದಂತೆ ಸರ್ಕಾರದ ಪ್ರತಿಯೊಂದು ಇಲಾಖೆಯ ಯೋಜನೆ   ಜನರಿಗೆ ಮುಟ್ಟಿಸಲು ಪ್ರಾಮಾಣಿ ಕವಾಗಿ ಪ್ರಯತ್ನಿಸುವುದನ್ನು ತಮ್ಮ ಮೂಲ ಉದ್ದೇಶವಾಗಿಟ್ಟುಕೊಂಡಿ ದ್ದಾರೆ ಬಳಗಾನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ನೂತನ ಸದಸ್ಯೆ ಶಾಂತಮ್ಮ ದಯಾನಂದರೆಡ್ಡಿ. ಕ್ಷೇತ್ರ ವ್ಯಾಪ್ತಿಯಲ್ಲಿ ಅಪೂರ್ಣ ಸ್ಥಿತಿ ಯಲ್ಲಿರುವ ಕುಡಿಯುವ ನೀರಿನ ಯೋಜನೆ, ರಸ್ತೆ ಸುಧಾರಣೆ, ವಿದ್ಯುತ್ ಸೌಲಭ್ಯಗಳನ್ನು ಪೂರ್ಣ ಗೊಳಿಸುವುದು ಪ್ರಥಮ ಹಂತದ ಕೆಲಸವೆಂದು ಭಾವಿಸಿದ್ದಾರೆ.

ಗೌಡನಬಾವಿಯಿಂದ ಪಗಡದಿನ್ನಿ ಕ್ಯಾಂಪ್ ರಸ್ತೆ ಕಾಮಗಾರಿ ನಡೆಯು ತ್ತಿದ್ದು, ಅದರ ಗುಣಮಟ್ಟದ ಬಗ್ಗೆ ನಿಗಾ ವಹಿಸುವೆ. ಎಡದಂಡೆ ನಾಲೆಯ 55 ಮತ್ತು 65ನೇ ವಿತರಣಾ ಕಾಲು ವೆಗಳ ದುರಸ್ತಿ ಪೂರ್ಣ ಗೊಳ್ಳಬೇಕಾಗಿದೆ. ಬಳಗಾನೂರು- ಮಸ್ಕಿ ಮಧ್ಯದಲ್ಲಿ ಬರುವ ಎರಡು ಸೇತುವೆ,ಬೆಳ್ಳಿಗನೂರು- ಬಳ ಗಾನೂರು ನಡುವಿನ ಒಂದು ಸೇತುವೆ, ಬಳಗಾನೂರು- ಜವಳ ಗೇರಾ ಮಧ್ಯದಲ್ಲಿ ಬರುವ ಎರಡು ಸೇತುವೆ, ಗೌಡನಬಾವಿ ಮತ್ತು ಪಗ ಡದಿನ್ನಿಕ್ಯಾಂಪ್ ನಡುವಿನ ಒಂದು ಸೇತುವೆಯ ಅಭಾವದಿಂದ ಗ್ರಾಮ ಗಳ ಸಂಪರ್ಕಕ್ಕೆ ತೊಂದರೆಯಾಗಿದೆ. ಹಳ್ಳಗಳು ತುಂಬಿದರೆ ಹಲವಾರು ಗ್ರಾಮಗಳಿಗೆ ಪಟ್ಟಣಗಳ ಸಂಪರ್ಕವೇ ಕಡಿತಗೊಳ್ಳುತ್ತದೆ. ಈ ಸಮಸ್ಯೆ ಬರುವ ದಿನಗಳಲ್ಲಿ ನಿವಾರಿಸ ಲಾಗುವುದು ಎಂದು ಶಾಂತಮ್ಮ ’ಪ್ರಜಾವಾಣಿ’ಗೆ ತಿಳಿಸಿದರು.

ಮಳೆಗಾಲದಲ್ಲಿ ಮುಳ್ಳೂರು ಗ್ರಾಮದ ಶಾಲೆಗೆ ನೀರು ನುಗ್ಗುತ್ತದೆ. ಆದ್ದರಿಂದ ಅಲ್ಲಿ ತಡೆಗೋಡೆ ನಿರ್ಮಿ ಸುವ, ಉದ್ಬಾಳ ಮತ್ತು ಹುಲ್ಲೂರು ಗ್ರಾಮದ ಶಾಲೆಗಳ ಕಂಪೌಂಡ್ ಮತ್ತು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಆಗಬೇಕಾಗಿದೆ. ತಿಪ್ಪನ ಹಟ್ಟಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. ಬಾಲಯ್ಯ ಕ್ಯಾಂಪ್, ಮುಳ್ಳೂರುಕ್ಯಾಂಪ್, ಸುಲ್ತಾನ್‌ಪುರ, ಬುದ್ದಿನ್ನಿ, ಗೌಡನ ಬಾವಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಗಳು ಅಪೂರ್ಣ ಗೊಂಡಿದ್ದು, ಆದಷ್ಟು ಶೀಘ್ರ ಪೂರ್ಣಗೊಳಿಸಲು ನಿಗಾ ವಹಿಸುವೆ. ಉದ್ಬಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರು ಪ್ಲೋರೈಡ್‌ಯುಕ್ತ ನೀರಿನಿಂದ ತೊಂದರೆ ಅನುಭವಿಸುತ್ತಿದ್ದಾರೆ.
 
ಈ ಸಮಸ್ಯೆ ನಿವಾರಣೆಗೆ ಉದ್ಬಾಳ ಹತ್ತಿರ ಅಂದಾನಯ್ಯ ಸ್ವಾಮಿ ಅವರ 21 ಎಕರೆ ಜಮೀನನ್ನು ಖರೀದಿಸಲು ನಿರ್ಧರಿಸಿದ್ದು, ಇದರಿಂದ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಅನುಕೂಲ ವಾಗಿದೆ. ಪಗಡದಿನ್ನಿಕ್ಯಾಂಪ್‌ಗೆ ಟ್ರಾನ್ಸ್‌ಫಾರ್ಮರ್ ಕೂಡಿಸ ಬೇಕಾಗಿದೆ. ಸುಲ್ತಾನಪುರ ಗ್ರಾಮ ದಲ್ಲಿ ವಿದ್ಯುತ್ ತಂತಿಗಳು ಕೆಳಕ್ಕೆ ಜೋತುಬಿದ್ದಿವೆ. ಅವುಗಳನ್ನು ತೆಗೆದು ಹೊಸ ತಂತಿಗಳನ್ನು ಹಾಕಬೇಕಾಗಿದೆ. ಮಹಿಳಾ ಶೌಚಾಲಯ, ಗ್ರಂಥಾ ಲಯ, ಯುವಕ, ಯುವತಿಯರಿಗೆ ಯುವಜನ ಸೇವಾ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸುವೆ.

ಗುಡದೂರಿನಿಂದ -ಕ್ಯಾತ್ನಟ್ಟಿ ವರೆಗೆ, ಬಳಗಾನೂರಿನಿಂದ ನಾರಾಯ ಣನಗರ ಕ್ಯಾಂಪ್, ಮಸ್ಕಿ- ಬಳಗಾನೂರು ರಸ್ತೆ ಹಾಗೂ ಬಳಗಾನೂರು ಗ್ರಾಮದ ಒಳ ರಸ್ತೆಗಳನ್ನು ಸುಧಾರಣೆ ಮಾಡಲು ಜಿಲ್ಲಾ ಪಂಚಾಯಿತಿಯಿಂದ ಕ್ರಮ ಕೈಗೊಳ್ಳುವುದಾಗಿ ಶಾಂತಮ್ಮ ದಯಾನಂದರೆಡ್ಡಿ ವಿವರಿಸಿದರು.ಅವಿರೋಧವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ 15 ಲಕ್ಷ ಅನುದಾನ ನೀಡುವುದಾಗಿ ಘೋಷಿ ಸಿದ್ದು ಆ ಹಣ ಮಂಜೂರಾದರೆ ಉದ್ಬಾಳ.ಯು. ಪಂಚಾಯಿತಿ ಕ್ಷೇತ್ರ ದಲ್ಲಿ ಹಲವು ಸಮಸ್ಯೆಗಳು ನಿವಾ ರಣೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.