ADVERTISEMENT

ರಾಜಕೀಯದಿಂದ ದೂರ:ಪೂಜಾಗಾಂಧಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 8:47 IST
Last Updated 3 ನವೆಂಬರ್ 2017, 8:47 IST
ರಾಯಚೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಗುರುವಾರ ಹಾಜರಾಗಿ ಹೊರ ಬಂದ ನಟಿ ಪೂಜಾ ಗಾಂಧಿ ಅವರು ಸುದ್ದಿಗಾರರನ್ನು ನೋಡಿ ನಗು ಬೀರಿದರು
ರಾಯಚೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಗುರುವಾರ ಹಾಜರಾಗಿ ಹೊರ ಬಂದ ನಟಿ ಪೂಜಾ ಗಾಂಧಿ ಅವರು ಸುದ್ದಿಗಾರರನ್ನು ನೋಡಿ ನಗು ಬೀರಿದರು   

ರಾಯಚೂರು: ‘ಇನ್ನು ಮುಂದೆ ರಾಜಕೀಯದಿಂದ ದೂರು ಇರುತ್ತೇನೆ’ ಎಂದು ನಟಿ ಪೂಜಾಗಾಂಧಿ ಗುರುವಾರ ಹೇಳಿದರು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನಗೆ ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಇವೆ. ಆದ್ದರಿಂದ ಚಿತ್ರರಂಗದಲ್ಲೇ ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ಮುಂದಿನ ತಿಂಗಳು ನನ್ನ ನಟನೆಯ ದಂಡುಪಾಳ್ಯ-3 ಬಿಡುಗಡೆ ಆಗಲಿದೆ. ‘ತಾಯಿ’ ಸಿನಿಮಾ ಐದು ಭಾಷೆಗಳಲ್ಲಿ ಶೂಟಿಂಗ್ ಕಾರ್ಯ ನಡೆಯುತ್ತಿದೆ’ ತಿಳಿಸಿದರು.

‘ಚುನಾವಣೆ ಸಂದರ್ಭದಲ್ಲಿ ನನ್ನ ಹೆಸರಿಗೆ ಮಸಿ ಬಳಿಯಲು ಪಿತೂರಿ ಮಾಡಿ ಈ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಬಗ್ಗೆ ಗೌರವ ಇರುವ ಕಾರಣ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ. ಮತ್ತೆ ನವೆಂಬರ್ 10 ಕ್ಕೆ ಕೋರ್ಟ್‌ಗೆ ಬರುತ್ತೇನೆ’ ಎಂದು ಹೇಳಿದರು.

ADVERTISEMENT

ರಾಯಚೂರು ಎಂದರೆ ಅಭಿಮಾನ’ 
ರಾಯಚೂರು ಹಾಗೂ ಇಲ್ಲಿಯ ಜನರ ಬಗ್ಗೆ ಅಭಿಮಾನವಿದೆ. ಆದ್ದರಿಂದ ನಿರಂತರ ಸಂಪರ್ಕದಲ್ಲಿ ಇರುತ್ತೇನೆ. ಚುನಾವಣೆ ಸಂದರ್ಭದಲ್ಲಿ ವಾಸವಾಗಿದ್ದ ಮನೆ ಬಳಿ ಹೋಗಿ ಜನರನ್ನು ಮಾತನಾಡಿಸಿದೆ. ತೀನ್ ಕಂದೀಲ್ ವೃತ್ತದಲ್ಲಿ ಸಾದಿಕ್ ಹೋಟೆಲ್‌ನ ಚಾಚಾರೊದಿಗೆ ಮಾತನಾಡಿ, ಚಹಾ ಕುಡಿದು ಬಂದಿದ್ದೇನೆ’ ಎಂದು ಪೂಜಾಗಾಂಧಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.