ADVERTISEMENT

ರಾಜಲಬಂಡಾ: ಕರವೇ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 7:13 IST
Last Updated 2 ಏಪ್ರಿಲ್ 2013, 7:13 IST

ರಾಯಚೂರು: ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗಡಿ ಗ್ರಾಮ ರಾಜಲಬಂಡಾದಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಮಾತನಾಡಬೇಕು. ಅದನ್ನೇ ಅಭ್ಯಾಸವಾಗಿಸಿಕೊಂಡು ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಜೈನ್ ಹೇಳಿದರು.

ರಾಯಚೂರು ತಾಲ್ಲೂಕಿನ ರಾಜಲಬಂಡಾ ಗ್ರಾಮದಲ್ಲಿ ಭಾನುವಾರ ಕರವೇ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಅಭಿವೃದ್ಧಿಪರ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ನಿಗಾವಹಿಸಬೇಕು. ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ  ಖಲೀಲ್ ಪಾಷಾ ಅಧ್ಯಕ್ಷತೆವಹಿಸಿದ್ದರು. ರಾಯಚೂರು ನಗರ ಘಟಕದ ಅಧ್ಯಕ್ಷ  ಮಾನಸಿಂಗ್ ಠಾಕೂರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಘುವೀರ ನಾಯಕ, ಉಪಾಧ್ಯಕ್ಷ ಮುಮ್ತಾಜುದ್ದೀನ್, ರಾಜಲಬಂಡಾ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮಾಜಿ ಸದಸ್ಯರಿದ್ದರು.

ನೂತನ ಪದಾಧಿಕಾರಿಗಳು: ಗ್ರಾಮದ ಕರವೇ ಘಟಕದ ನೂತನ ಪದಾಧಿಕಾರಿಗಳಾಗಿ ಜನಾರ್ದನ (ಅಧ್ಯಕ್ಷ), ಕೆ ಹನುಮಂತ, ಬಿ ನರಸಿಂಹ ನಾಯಕ (ಉಪಾಧ್ಯಕ್ಷರು),ಆರ್ ಸತ್ಯರೆಡ್ಡಿ (ಪ್ರಧಾನ ಕಾರ್ಯದರ್ಶಿ), ಎಂ ವಿರೇಶರೆಡ್ಡಿ   (ಖಜಾಂಚಿ),  ಬಿ ವಿರೇಶ,   ಕೆ ರಾಘವೇಂದ್ರ, ಆಂಜನೇಯ, ಟಿ ಲಕ್ಷ್ಮಣ (ಸಂಘಟನಾ ಕಾರ್ಯದರ್ಶಿಗಳು), ಕೆ ರಾಮಪ್ಪ ಮತ್ತು ಬಿ ನರಸಿಂಹಲು (ಸಹ ಕಾರ್ಯದರ್ಶಿಗಳು) ಆಯ್ಕೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.