ADVERTISEMENT

ವಿದ್ಯಾರ್ಥಿಗಳಿಂದ ಮಾದರಿ ಅಣಕು ಸಂಸತ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 8:36 IST
Last Updated 22 ಡಿಸೆಂಬರ್ 2012, 8:36 IST

ರಾಯಚೂರು: ಶಾಲೆಯಲ್ಲಿ ಮಾದರಿ ಅಣಕು ಸಂಸತ್ ಸ್ಪರ್ಧೆ ಆಯೋಜಿಸುವುದರಿಂದ ಎಲ್ಲ ಮಕ್ಕಳಿಗೆ ರಾಜಕೀಯ ವ್ಯವಸ್ಥೆಯ ಬಗ್ಗೆ ತಿಳಿಯಲು ಅವಕಾಶವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪಸಮನ್ವಯಾಧಿಕಾರಿ ಚಂದ್ರಶೇಖರ ಭಂಡಾರಿ ಹೇಳಿದರು.

ಸಮೀಪದ ಯರಮರಸ್ ಕ್ಯಾಂಪ್‌ನ ಅಫ್ತಾಬ್ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ಏರ್ಪಡಿಸಿದ್ಧ ತಾಲ್ಲೂಕು ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾದರಿ ಅಣಕು ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆವಹಿಸಿದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಹಕ್ಕು ತಿಳಿಯಬೇಕಾದರೆ ರಾಜಕೀಯ ಜ್ಞಾನ ಅವಶ್ಯಕವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಹನುಮಂತಪ್ಪ ಗವಾಯಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಬು ಭಂಡಾರಿಗಲ್, ಮಾದರಿ ತಾಲ್ಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಯ್ಯದ್ ಸಿರಾಜ್, ಇಂಗ್ಲಿಷ್ ವಿಷಯ ಪರಿವೀಕ್ಷಕ ದೊಡ್ಡಮನಿ, ಗಣಿತ ವಿಷಯ ಪರಿವೀಕ್ಷಕ ಅರುಣಕುಮಾರ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಬಿ ರಾಮಯ್ಯ ಮಾತನಾಡಿದರು.

ವಿಜೇತ ಮಕ್ಕಳಿಗೆ ದಿವಂಗತ ಎಂ ರಂಗನಾಥರಾವ್ ಅವರ ಸ್ಮರಣಾರ್ಥ ಶಿಕ್ಷಕರಾದ ಎಂ ವಿಜಯಕುಮಾರ ಅವರು ದೇಣಿಕೆಯಾಗಿ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಿದರು. ವೆಂಕಟೇಶ ಜಾಲಿಬೆಂಚಿ ಸ್ವಾಗತಿಸಿದರು. ಎಂ ವಿಜಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.