ADVERTISEMENT

ಸಾಂಸ್ಕೃತಿಕ ಉತ್ಸವ: ಗಮನ ಸೆಳೆದ ಕಲಾತಂಡ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:03 IST
Last Updated 24 ನವೆಂಬರ್ 2017, 6:03 IST

ಗುರುವಾರ ರಾಷ್ಟ್ರೀಯ ಸಮಗ್ರ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡಿದರು.

‘ವೈಜ್ಞಾನಿಕ ಹಾಗೂ ಟಿ.ವಿ ಮಾಧ್ಯಮಗಳ ಅರ್ಭಟಕ್ಕೆ ಗ್ರಾಮೀಣ ಕಲೆಗಳು ಕಣ್ಮರೆಯಾಗುತ್ತಿವೆ. ಅಲ್ಲಲ್ಲಿ ಸಾಂಸ್ಕೃತಿಕ ಉತ್ಸವದಂತ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷೆ ಶ್ವೇತಾ ಮೇಟಿ, ವಕೀಲರಾದ ಪ್ರೇರಣಾ ರಾಮನಗೌಡ್ರ ಮಾತನಾಡಿ, ‘ಭಾರತೀಯ ಸಂಸ್ಕೃತಿಯಲ್ಲಿ ಗ್ರಾಮೀಣ ಕಲೆಗಳ ಕೊಡುಗೆ ಅಪಾರ. ಅಂತಹ ಕಲೆಗಳಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಿ ಹೆಚ್ಚಿನ ಅನುದಾನ ನೀಡುವ ಮೂಲಕ ಉಳಿಸಿ ಬೆಳೆಸಲು ಮುಂದಾಗಬೇಕು. ನಶಿಸುತ್ತಿರುವ ಗ್ರಾಮೀಣ ಕಲೆಗಳಿಗೆ ತಾವುಗಳು ಸಹಾಯ, ಸಹಕಾರ ನೀಡಬೇಕು’ ಎಂದು ನಾಗರಿಕರಲ್ಲಿ ಮನವಿ ಮಾಡಿದರು.

ADVERTISEMENT

ಅದ್ಧೂರಿ ಸಾಂಸ್ಕೃತಿಕ ಉತ್ಸವ: ಸಾಂಸ್ಕೃತಿಕ ಉತ್ಸವ ನಿಮಿತ್ತ ಗುರುವಾರ ಬಸ್‌ ನಿಲ್ದಾಣದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳ ಮೆರವಣಿಗೆ ಮೂಲಕ ಕೆಕೆಎಸ್‌ಆರ್‌ ಕಲ್ಯಾಣ ಮಂಟಪದವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಹಗಲು ವೇಷಧಾರಿ,ಯುವತಿಯರ ಡೊಳ್ಳು ಕುಣಿತ ಪ್ರದರ್ಶನ ಗಮನ ಸೆಳೆದವು. ಸಾಂಸ್ಕೃತಿಕ ಉತ್ಸವದಲ್ಲಿ ಸುಗಮ ಸಂಗೀತ, ರಸಮಂಜರಿ ಮಂಗಳಮುಖಿಯರ ನೃತ್ಯ, ಲಂಬಾಣಿ ತಂಡದವರಿಂದ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜನಮನಸೂರೆಗೊಂಡವು.

ಪತ್ರಕರ್ತ ಬಿ.ಎ. ನಂದಿಕೋಲಮಠ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸಮಗ್ರ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ. ವಿಜಯಕುಮಾರಿ ಎಸ್‌.ವೈ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಶರಣಬಸವ ಪಾಟೀಲ, ಹಟ್ಟಿ ಚಿನ್ನದ ಗಣಿ ಕ್ರೀಡಾ ಸಂಸ್ಥೆ ಕಾರ್ಯದರ್ಶಿ ಯಾಖೂಬ್‌, ಸ್ಫೂರ್ತಿ ಸಂಸ್ಥೆ ಅಧ್ಯಕ್ಷ ಅಮರೇಶ ತಾವರಗೇರ, ರಾಮಪ್ರಸಾದ ಎಸ್‌.ವೈ., ಮುಖಂಡರಾದ ಬಿ.ಎಚ್‌. ಕಂಪ್ಲಿ, ರಾಘವೇಂದ್ರ ಮಸ್ಕಿ, ರತ್ನಕುಮಾರಿ, ಅಮರಮ್ಮ ಪಾಟೀಲ, ಸುಜಾತ ಮಸ್ಕಿ, ಶರಣಬಸವ ಪಾಟೀಲ, ಜೋಸೆಫ್‌ಬಾಬು, ಸುಲೋಮಿ ಎಸ್‌.ವೈ., ರೇಷ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.