ADVERTISEMENT

ಸೋಮಶೇಖರ ಬ್ಯಾಂಕ್‌ ಖಾತೆಯಲ್ಲಿ ನಗದು ₨ 3,539!

ಪತ್ನಿ ಹೆಸರಲ್ಲಿ ಸೈದಾಪುರದಲ್ಲಿ ನಿವೇಶನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 10:35 IST
Last Updated 21 ಮಾರ್ಚ್ 2014, 10:35 IST

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಕೆ ಸೋಮಶೇಖರ ಯಾದಗಿರಿ ಅವರು ಅಫಿಡೇವಿಟ್‌ನಲ್ಲಿ ಸಲ್ಲಿಸಿದ ಆಸ್ತಿ ವಿವರ ಇಂತಿದೆ.

ಬ್ಯಾಂಕ್‌ ಖಾತೆಯಲ್ಲಿ ₨ 3,539 ಹೊಂದಿದ್ದು, ಮತ್ತಿನ್ಯಾವುದೇ ರೀತಿ ನಗದು ಹೊಂದಿಲ್ಲ.  ಸಾಲ, ವಾಹನ, ಆಭರಣ, ನಿವೇಶನ, ಜಮೀನು, ಮನೆ, ವಾಣಿಜ್ಯ ಕಟ್ಟಡ ಯಾವುದನ್ನೂ ಹೊಂದಿಲ್ಲ ಎಂದು ಪ್ರಮಾಣೀಕರಿಸಿದ್ದಾರೆ.

ಪತ್ನಿ ಹೆಸರಲ್ಲಿ ಯಾದಗಿರಿ ಜಿಲ್ಲೆಯ ಸೈದಾಪುರ ಗ್ರಾಮದಲ್ಲಿ 442.91 ಚದುರ ಅಡಿ ನಿವೇಶನ (ಎನ್ಎ ಲ್ಯಾಂಡ್) ಇದೆ. 1991ರಲ್ಲಿ ಖರೀದಿಸಿ ಜಮೀನು ಆಗಿದೆ ಎಂದು ಅಫಿಡೇವಿಟ್‌ನಲ್ಲಿ ಸಲ್ಲಿಸಿದ್ದಾರೆ. ತಾವು ಮತ್ತು ತಮ್ಮ ಪತ್ನಿ ಸಮಾಜ ಸೇವಕರಾಗಿದ್ದು, ಬಿಎ ಪದವೀಧರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.