ADVERTISEMENT

‘ಮಹಿಳಾ ಸಬಲೀಕರಣಕ್ಕೆ ಕಾನೂನು ಜ್ಞಾನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 7:09 IST
Last Updated 18 ಮಾರ್ಚ್ 2014, 7:09 IST

ಲಿಂಗಸುಗೂರು: ಮಹಿಳೆಯರ ಸಬಲೀಕರಣಕ್ಕೆ ಸರ್ಕಾರಗಳು ಸಾಕಷ್ಟು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದೆ. ಅಂತಹ ಕಾನೂನುಗಳ ತಿಳಿವಳಿಕೆ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಕನಿಷ್ಠ ಮಟ್ಟದ ಜ್ಞಾನ ಹೊಂದಿರುವ ಅವಶ್ಯಕತೆ ಇದೆ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಆರ್‌.ವೈ. ಶಶಿಧರ ಹೇಳಿದರು.

ಈಚೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತ­ನಾಡಿ, ಮಹಿಳೆಯರು ಪುರುಷ­ರಷ್ಟೆ ಸಮಾನ ಹಕ್ಕುಳ್ಳವರು. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ್ದು ಅದರ ಸದ್ಭಳಕೆಗೆ ಮುಂದಾಗುವಂತೆ ಮನವಿ ಮಾಡಿದರು.

ಕಿರಿಯ ಶ್ರೇಣಿ ಸಿವಿಲ್‌ ನ್ಯಾಯಾ­ಧೀಶ ದ್ಯಾವಪ್ಪ ಎಸ್‌.ಬಿ. ಸಹಾಯಕ ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಬಳಬಟ್ಟಿ, ಪೊಲೀಸ್‌ ಉಪ ವಿಭಾಗಾಧಿಕಾರಿ ಅನಿತಾ ಹದ್ದಣ್ಣವರ, ಪ್ರಾಚಾರ್ಯ ಎಚ್‌.ಎಲ್‌. ಪವಾರ, ವಕೀಲರಾದ ಪ್ರೇರಣಾ ರಾಮನಗೌಡ್ರ, ಕೌಸ್ತುಭಾ ಜೋಷಿ ಮಹಿಳೆ ಮತ್ತು ಕಾನೂನು ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.