ADVERTISEMENT

‘ಸಹಕಾರಿ ಬ್ಯಾಂಕ್ ಶಿಕ್ಷಕರ ಆಶಾಕಿರಣ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 6:41 IST
Last Updated 23 ಸೆಪ್ಟೆಂಬರ್ 2013, 6:41 IST

ಲಿಂಗಸುಗೂರು: ಪರಸ್ಪರ ಸಹಕಾರದ ಮೂಲಕ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳಲು ಸ್ಥಾಪನೆ ಮಾಡಿರುವ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಬ್ಯಾಂಕ್‌ ಶಿಕ್ಷಕರ ಪಾಲಿಗೆ ಆಶಾಕಿರಣವಾಗಿ ಬೆಳೆದು ನಿಂತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮರೇಶ ಭೋವಿ ಹೇಳಿದರು.

ಭಾನುವಾರ ಪತ್ತಿನ ಸಹಕಾರಿ ಬಾ್ಯಂಕ್‌ನ 19ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸಾ್ಥಪಿಸಿ­ಕೊಂಡಿ­ರುವ ಲಿಂಗಸುಗೂರ ಬೆಲೆ ಏರಿಕೆ ಬಿಸಿ ಮಧ್ಯೆ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರ. ಸಹಕಾರಿ ಬಾ್ಯಂಕ್‌ ಸಾ್ಥಪಿಸಿಕೊಳ್ಳುವ ಮೂಲಕ ಆರ್ಥಿಕ ಸಾ್ವವಲಂಬನೆ ಕಂಡುಕೊಂಡಿದ್ದು ಖುಷಿ ತಂದಿದೆ. ವಿಭಾಗ ಮಟ್ಟದಲ್ಲಿ ಉತ್ತಮ ಬಾ್ಯಂಕ್‌ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವುದು ಶಿಕ್ಷಣ ಇಲಾಖೆ ಹಿರಿಮೆ ಹೆಚ್ಚಿಸಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಜಿಮಲಂಗಬಾಬಾ ಅವರನ್ನು ಸಹಕಾರಿ ಪರವಾಗಿ ಸನ್ಮಾನಿಸ­ಲಾಯಿತು. ಸಹಕಾರಿ ಬಾ್ಯಂಕ್‌ನ ಲೆಕ್ಕಪತ್ರ, ಮುಂಗಡ ಪತ್ರ, ಲೆಕ್ಕಪರಿ­ಶೋಧನೆ, ನಿಯಾಮಾವಳಿ ತಿದ್ದುಪಡಿ, ವಿಮಾ ಸೌಲಭ್ಯ, ಲಾಭಾಂಶ ಮತ್ತು ನಿವ್ವಳ ಲಾಭಗಳ ಕುರಿತಂತೆ ನಿರ್ದೇಶಕರು ವಿಷಯ ಮಂಡನೆ ಮಾಡಿ ಮಹಾಸಭೆ ಒಪ್ಪಿಗೆ ಪಡೆದರು.

ಸಹಕಾರಿ ಬಾ್ಯಂಕ್‌ನ ಅಧ್ಯಕ್ಷ ಬಸಗೊಂಡ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಗಂಗಮ್ಮ ಸತ್ಯಂಪೇಟೆ ವಿಶೇಷ ಉಪನಾ್ಯಸ ನೀಡಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸಾ್ಥಪಕ ಎ.ಬಿ. ಮಾಲಿಪಾಟೀಲ. ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಮೂಲಮನಿ.  ಸಹಕಾರಿ ಬಾ್ಯಂಕ್‌ ಗೌರವಾಧ್ಯಕ್ಷ ಮಹ್ಮದಅಲಿ ದೋಟಿಹಾಳ. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಭೀಮಣ್ಣ ನಾಯಕ.

ಪಾ್ರಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಯೋಗಪ್ಪ. ಸಹಕಾರಿ ಬಾ್ಯಂಕ್‌ನ ಮಾಜಿ ಅಧ್ಯಕ್ಷರುಗಳಾದ ಸೊಲಬಣ್ಣ ತಂಬಾಕೆ, ಶಿವಪುತ್ರಪ್ಪ ಬೆಳ್ಳಿಗನೂರು, ಶಿವಶಂಕರ ಪಾಟೀಲ, ನಿರ್ದೇಶಕರಾದ ಶರಣಪ್ಪ, ಎನ್‌.ಬಿ. ಠಾಕೂರು, ಶೇಖರಗೌಡ, ದುರುಗಪ್ಪ, ಅಮರೇಶ ದೇಸಾಯಿ ಮತ್ತಿತರರು ಪಾಲೊ್ಗಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.