ADVERTISEMENT

1600 ಕ್ಯುಸೆಕ್ ನೀರು ಬಿಡುಗಡೆ: ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 12:04 IST
Last Updated 7 ಸೆಪ್ಟೆಂಬರ್ 2022, 12:04 IST
ಮಸ್ಕಿ ಜಲಾಶಯದ ನಾಲ್ಕು ಗೇಟ್‌ಗಳ ಮೂಲಕ ಬುಧವಾರ ಮಸ್ಕಿ ಹಳ್ಳಕ್ಕೆ ನೀರು ಬಿಡಲಾಯಿತು
ಮಸ್ಕಿ ಜಲಾಶಯದ ನಾಲ್ಕು ಗೇಟ್‌ಗಳ ಮೂಲಕ ಬುಧವಾರ ಮಸ್ಕಿ ಹಳ್ಳಕ್ಕೆ ನೀರು ಬಿಡಲಾಯಿತು   

ಮಸ್ಕಿ: ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಸ್ಕಿ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚಿದ ಮಳೆಯಿಂದ ತಾಲ್ಲೂಕಿನ ಮಾರಲದಿನ್ನಿ ಸಮೀಪದ ಮಸ್ಕಿ ಜಲಾಶಯದ ಒಳ ಹರಿವು ಹೆಚ್ಚಿದೆ.

ಬುಧವಾರ ನೀರಿನ ಒಳ ಹರಿವು 1700 ಕ್ಯುಸೆಕ್‌ ಇದ್ದು 1600 ಕ್ಯುಸೆಕ್‌ ನೀರನ್ನು ನಾಲ್ಕು ಗೇಟ್‌ಗಳ ಮೂಲಕ ಮಸ್ಕಿ ಹಳ್ಳಕ್ಕೆ ಬಿಡಲಾಗಿದೆ. ಮಸ್ಕಿ ಹಳ್ಳದಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಹಳ್ಳಕ್ಕೆ ಜಲಾಶಯದಿಂದ ಹೆಚ್ವಿನ ನೀರು ಬಿಡುತ್ತಿದ್ದರಿಂದ ಹಳ್ಳದ ದಂಡೆಯ ಗ್ರಾಮಸ್ಥರು ಹಳ್ಳದಲ್ಲಿ ಇಳಿಯದಂತೆ ಯೋಜನೆ ಎಂಜನಿಯರ್ ದಾವುದ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ADVERTISEMENT

ಬುಧವಾರ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗಿದೆ. ಬಸವೇಶ್ವರ ನಗರದ ಜೆಸ್ಕಾಂ ನ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದ್ದು ಬಡಾವಣೆ ಜನ ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. ಬಡವಾಣೆಯ ಉದ್ಯಾನ, ತಹಶೀಲ್ದಾರ್ ಕಚೇರಿ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿವೆ‌.

ಸೋಮನಾಥ ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಸ್ಥಳೀಯ ನಿವಾಸಿಗಳು ನೀರು ಹೊರ ಹಾಕಲು ಹರ ಸಾಹಸ ಪಟ್ಟರು. ವಾಲ್ಮೀಕಿ ನಗರ, ಧನಗಾರವಾಡಿ, ಭೋವಿ ಕಾಲೊನಿ, ಗಾಂಧಿ ನಗರ ಸೇರಿದಂತೆ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಿಂತ ನೀರನ್ನು ಹೊರ ಕಳಿಸಲು ಪುರಸಭೆ ಸಿಬ್ಬಂದಿ ಹರಸಾಹಸಪಟ್ಟರು.

ತಾಲ್ಲೂಕಿನಾದ್ಯಂತ ಹಳ್ಳಗಳು ತುಂಬಿ ಹರಿಯತೋಡಗಿದ್ದು ಕೆಲವೊಂದು ಗ್ರಾಮಗಗಳು ರಸ್ತೆ ಸಂಪರ್ಕ ಸ್ಥಗಿತಗೊಂಡ ವರದಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.