ADVERTISEMENT

ರಾಯಚೂರು ಜಿಲ್ಲೆಯಲ್ಲಿ ಮತ್ತೆ 184 ಜನರಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 15:22 IST
Last Updated 24 ಆಗಸ್ಟ್ 2020, 15:22 IST
   

ರಾಯಚೂರು:ಜಿಲ್ಲೆಯಲ್ಲಿ ಸೋಮವಾರ ಮತ್ತೆ 184 ಜನರಿಗೆ ಕೋವಿಡ್‌ ದೃಢವಾಗಿದೆ. ಇದೇ ವೇಳೆ,ಕೋವಿಡ್‌ನಿಂದ ಗುಣಮುಖರಾಗಿದ್ದ 113 ಜನರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ 1,324 ಸಕ್ರಿಯ ಪ್ರಕರಣಗಳಿವೆ.

ಇದುವರೆಗೂ ಒಟ್ಟು 6,047 ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಗುಣಮುಖರಾದವರು ಒಟ್ಟು 4,645 ಜನರು. ಕೋವಿಡ್‌ನಿಂದ ಮತ್ತೆ ಇಬ್ಬರು ಮೃತರಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 78 ಕ್ಕೆ ಏರಿಕೆ ಆಗಿದೆ.

ಗಂಭೀರ ಸ್ಥಿತಿಯಲ್ಲಿದ್ದ 11 ಜನರನ್ನು ಒಪೆಕ್‌ಗೆ ದಾಖಲಿಸಲಾಗಿದ್ದು, ಒಟ್ಟು 239 ಜನರು ಆಸ್ಪತ್ರೆಯಲ್ಲಿದ್ದಾರೆ. ಒಟ್ಟು 3546 ಮಾದರಿಗಳ ವರದಿ ಬರಬೇಕಿದೆ. ಇದುವರೆಗೂ ಒಟ್ಟು 66,044 ಜನರಿಂದ ಗಂಟಲು ದ್ರವ ಸಂಗ್ರಹಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.