ADVERTISEMENT

ರಾಯಚೂರು ತಾಲ್ಲೂಕಿನಲ್ಲಿ 48 ಎಂಎಂ ಮಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 13:50 IST
Last Updated 19 ಸೆಪ್ಟೆಂಬರ್ 2020, 13:50 IST

ರಾಯಚೂರು: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೂ 16 ಮಿಲಿಮೀಟರ್‌ ಮಳೆಯಾಗಿದ್ದು, ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು 48 ಮಿಲಿಮೀಟರ್ ಮಳೆ ಸುರಿದಿದೆ.

ದೇವದುರ್ಗ ತಾಲ್ಲೂಕಿನಲ್ಲಿ 16, ಲಿಂಗಸುಗೂರು ತಾಲ್ಲೂಕಿನಲ್ಲಿ 2, ಮಾನ್ವಿ ತಾಲ್ಲೂಕಿನಲ್ಲಿ 15, ಸಿಂಧನೂರು ತಾಲ್ಲೂಕಿನಲ್ಲಕಿ 6, ಮಸ್ಕಿ ತಾಲ್ಲೂಕಿನಲ್ಲಿ 5 ಹಾಗೂ ಸಿರವಾರ ತಾಲ್ಲೂಕಿನಲ್ಲಿ 14 ಮಿಲಿಮೀಟರ್‌ ಮಳೆಯಾಗಿದೆ. ವಾಡಿಕೆ ಮಳೆ 8 ಮಿಲಿಮೀಟರ್‌ ಇದ್ದು, ವಾಸ್ತವ ಮಳೆ 16 ಮಿಲಿಮೀಟರ್‌ ಆಗಿದೆ.

ಸೆಪ್ಟೆಂಬರ್ 1 ರಿಂದ 19 ರವರೆಗೂ ಜಿಲ್ಲೆಯಲ್ಲಿ ಶೇ 36 ರಷ್ಟು ಅಧಿಕ ಮಳೆಯಾಗಿದೆ. ರಾಯಚೂರು ತಾಲ್ಲೂಕಿನಲ್ಲಿ ಶೇ 69 ರಷ್ಟು ಅತಿಹೆಚ್ಚು ಮಳೆಯಾಗಿದ್ದು, ಹತ್ತಿ, ಭತ್ತ, ಮೆಣಸಿನಕಾಯಿ ಹಾಗೂ ತೊಗರಿ ಬೆಳೆಗಳನ್ನು ಹಾನಿಗೊಳಿಸಿದೆ. ದೇವದುರ್ಗ ತಾಲ್ಲೂಕಿನಲ್ಲಿ ಶೇ 5, ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ25, ಮಾನ್ವಿ ತಾಲ್ಲೂಕಿನಲ್ಲಿ ಶೇ27, ಸಿಂಧನೂರು ತಾಲ್ಲೂಕಿನಲ್ಲಿ ಶೇ23, ಮಸ್ಕಿ ತಾಲ್ಲೂಕಿನಲ್ಲಿ ಶೇ 46 ಹಾಗೂ ಸಿರವಾರ ತಾಲ್ಲೂಕಿನಲ್ಲಿ ಶೇ 26 ಮಿಲಿಮೀಟರ್‌ ಮಳೆಯಾಗಿದೆ. ವಾಡಿಕೆ ಮಳೆ 85 ಮಿಲಿಮೀಟರ್‌ ಇದ್ದು, ವಾಸ್ತವ ಮಳೆ 115 ಮಿಲಿಮೀಟರ್‌ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.