ADVERTISEMENT

‘ಕೈ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 4:46 IST
Last Updated 3 ಫೆಬ್ರುವರಿ 2018, 4:46 IST
ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ಗುರುವಾರ ಗುಡಿ ಕೈಗಾರಿಕೆಯ ವಸ್ತುಗಳು, ಕೃಷಿ ಕಾರ್ಮಿಕರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ರಂಗಕರ್ಮಿ ಪ್ರಸನ್ನ ಜಾಗೃತಿ ಮೂಡಿಸಿದರು
ಮುದಗಲ್ ಸಮೀಪದ ನಾಗರಾಳ ಗ್ರಾಮದಲ್ಲಿ ಗುರುವಾರ ಗುಡಿ ಕೈಗಾರಿಕೆಯ ವಸ್ತುಗಳು, ಕೃಷಿ ಕಾರ್ಮಿಕರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂದು ರಂಗಕರ್ಮಿ ಪ್ರಸನ್ನ ಜಾಗೃತಿ ಮೂಡಿಸಿದರು   

ಮುದಗಲ್: ‘ಗುಡಿ ಕೈಗಾರಿಕೆಯ ವಸ್ತುಗಳು, ಕೃಷಿ ಕಾರ್ಮಿಕರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು’ ಎಂದು ರಂಗಕರ್ಮಿ ಪ್ರಸನ್ನ ಸಮೀಪದ ನಾಗರಾಳ ಗ್ರಾಮದಲ್ಲಿ ಗುರುವಾರ ಪಾದಯಾತ್ರೆ ಮಾಡಿ ಜಾಗೃತಿ ಮೂಡಿಸಿದರು.

‘ವಿವಿಧ ಗುಡಿ ಕೈಗಾರಿಕೆ ಕುಶಲಕರ್ಮಿಗಳು ಒಂದೆಡೆ ಸೇರಿ ಜಿಎಸ್‌ಟಿ ವಿರುದ್ಧ ಹೋರಾಟ ಮಾಡಬೇಕು. ಕೈ ಉತ್ಪನ್ನಗಳಿಗೆ ಶೂನ್ಯಕರ ವಿಧಿಸಬೇಕು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ. ಇದರಿಂದಾಗಿ ಕೊಡೇಕಲ್ ನಿಂದ ಕೊಟ್ಟೂರುವರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹೊಸಪೇಟೆ ಹಾಗೂ ಕೊಟ್ಟೂರಲ್ಲಿ ಸಮಾವೇಶಗಳು ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ’ ಎಂದು ಹೇಳಿದರು.

ಪರಿಸರ ತಜ್ಞ ಯತಿರಾಜ, ಗಜೇಂದ್ರಗಡದ ಕೆಂಚರಡ್ಡಿ, ನಾಗರಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾವಮ್ಮ ಮುಕ್ಕಣ್ಣನವರ, ಮೋಕ್ಷಮ್ಮ, ಗೋಪಿಕೃಷ್ಣ, ರೈತರು, ನೇಕಾರರು, ಕುಶಲಕರ್ಮಿಗಳು, ಪಶುಪಾಲಕರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು, ಲೇಖಕರು, ಪ್ರಜ್ಞಾವಂತರು ಪಾದಯಾತ್ರೆಯಲ್ಲಿ
ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.