ADVERTISEMENT

ರಾಯಚೂರು: ಹೆದ್ದಾರಿ ವಿಸ್ತರಣೆಗೆ ಮಂದಿರ, ಮಸೀದಿ ತೆರವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 5:16 IST
Last Updated 22 ಫೆಬ್ರುವರಿ 2018, 5:16 IST
ರಾಮಮಂದಿರ ಒಡೆದು ಹಾಕಲಾಗಿದೆ
ರಾಮಮಂದಿರ ಒಡೆದು ಹಾಕಲಾಗಿದೆ   

ರಾಯಚೂರು: ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167) ವಿಸ್ತರಣೆ ಕಾಮಗಾರಿಯಲ್ಲಿ ಅಡ್ಡಲಾಗಿದ್ದ ನಗರದ ರಾಮಮಂದಿರ ಹಾಗೂ ಅಂಬೇಡ್ಕರ್ ವೃತ್ತ ಪಕ್ಕದ ಮಸೀದಿ ಎರಡನ್ನೂ ಏಕಕಾಲಕ್ಕೆ ಬುಧವಾರ ಮಧ್ಯರಾತ್ರಿ ನಗರಸಭೆ ಅಧಿಕಾರಿಗಳು ತೆರವು ಮಾಡಿದ್ದಾರೆ.

ಸುಮಾರು ಆರು ಅಡಿಗಳಷ್ಟು ಭಾಗವನ್ನು ಒಡೆದು ಹಾಕಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ರಾತ್ರಿಯಿಂದಲೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಸ್ ಬಿಡುಬಿಟ್ಟಿದೆ. ಈ ಹಿಂದೆ ಅನೇಕ ಸಲ ತೆರವು ಕಾರ್ಯಾಚರಣೆ ಮಾಡುವಾಗ ಆಯಾ ಧರ್ಮದ ಜನರು ಅಡ್ಡಿಪಡಿಸಿದ್ದರು. ತಾವೇ ತೆರವು ಮಾಡಿಕೊಡುತ್ತೇವೆ ಎನ್ನುವ ವಾಗ್ದಾನವನ್ನು ಮಂದಿರ ಹಾಗೂ ಮಸೀದಿ ಮಂಡಳಿ ಕಡೆಯವರು ನೀಡಿದ್ದರು.

ಗಡುವು ಮೀರಿದರೂ ತೆರವು ಮಾಡಿಕೊಳ್ಳದ ಕಾರಣ, ಈ ಸಲ ಯಾವುದೆ ಮನ್ಸೂಚನೆಯನ್ನು ಅಧಿಕಾರಿಗಳು ನೀಡಿದಂತಿಲ್ಲ. ಮಸೀದಿ ಹಾಗೂ ಮಂದಿರ ಕಟ್ಟಡಗಳ ಭಾಗವನ್ನು ಜೆಸಿಬಿ ಯಂತ್ರದಿಂದ ಒಡೆದು ಹಾಕಲಾಗಿದೆ. ಕಟ್ಟಡಗಳ ಅವಶೇಷ ಇನ್ನೂ ಎತ್ತಿ ಹಾಕಿಲ್ಲ. 

ADVERTISEMENT

ಮೊದಲು ರಾಮಮಂದಿರ ತೆರವುಗೊಳಿಸಿ, ಮೊದಲು ಮಸೀದಿ ತೆರವುಗೊಳಿಸಿ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿಕೊಂಡು ಬರಲಾಗಿತ್ತು. ಇದೀಗ ಯಾವ ಅಡ್ಡಿ ಇಲ್ಲದೆ ಕಟ್ಟಡ ತೆರವುಗೊಳಿಸಲಾಗಿದೆ.

ಸರ್ಕಾರಿ ಐ.ಬಿ.ಯಿಂದ ಬಸವೇಶ್ವರ ವೃತ್ತದವರೆಗೂ ಎರಡು ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಸಿಸಿ ರಸ್ತೆ ಮಾಡಲಾಗಿದೆ. ಇದೇ ಮಾರ್ಗದಲ್ಲಿರುವ ರಾಮಮಂದಿರ ಹಾಗೂ ಮಸೀದಿ ಇರುವ ಕಡೆ ಸಿಸಿ ರಸ್ತೆಗೆ ಹೊಂದಿಕೊಂಡು ಚರಂಡಿ ಹಾಗೂ ಪಾದರಸ್ತೆ ನಿರ್ಮಾಣ ಬಾಕಿ ಉಳಿದಿತ್ತು.

ಮಸೀದಿ ಒಡೆದು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.