ADVERTISEMENT

‘ಛಲವಾದಿ ನಾರಾಯಣಸ್ವಾಮಿ ರಾಜೀನಾಮೆಗೆ ವಸಂತ ಕುಮಾರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:37 IST
Last Updated 8 ಮೇ 2025, 15:37 IST
ಎ.‌ ವಸಂತಕುಮಾರ
ಎ.‌ ವಸಂತಕುಮಾರ   

ರಾಯಚೂರು: ‘ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಸಮಾದಿಗೆ‌ ಕಾಂಗ್ರೆಸ್ ಜಾಗ‌ ನೀಡಲಿಲ್ಲ ಎಂಬುದು ನಾನು ಸಾಬೀತುಪಡಿಸುತ್ತೇನೆ ಇಲ್ಲ ಎನ್ನುವುದು ಸಿ.ಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾಬೀತುಪಡಿಸಲಿ‌‌ ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕಾ ಖರ್ಗೆ ನಿನ್ನೆ ದಾಖಲೆ ಸಮೇತ ಉತ್ತರ ನೀಡಿದ್ದಾರೆ. ಇತಿಹಾಸ ಮರೆಮಾಚಿ ದೇಶದ ಜನರಿಗೆ, ದಲಿತರ ದಾರಿ ತಪ್ಪಿಸಿದ ಛಲವಾದಿ ನಾರಾಯಣಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎ.‌ ವಸಂತಕುಮಾರ ಎಂದು ಆಗ್ರಹಿಸಿದರು.

‘ಅಂಬೇಡ್ಕರ್ ಅವರು ಮಿತ್ರ ಕಮಲಕಾಂತ್ ಅವರಿಗೆ ಬರೆದ ಪತ್ರದಲ್ಲಿ ‘ನನ್ನ ಸೋಲಿಗೆ ಕಮ್ಯುನಿಸ್ಟ್ ಪಕ್ಷದ ನಾಯಕ ಡಾಂಗೆ ಮತ್ತು ಆರ್‌ಎಸ್‌ಎಸ್‌ನ ಸಾವರ್ಕರ್ ಕಾರಣ’ ಎಂದು ಉಲ್ಲೇಖಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆ ಪ್ರಿಯಾಂಕಾ ಖರ್ಗೆ ನೀಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಸತ್ಯವನ್ನು, ಇತಿಹಾಸವನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಗುರುವಾರ ಮಾಧ್ಯಮಗೊಷ್ಠಿಯಲ್ಲಿ ಆರೋಪ ಮಾಡಿದರು.

‘ನಾನೂ ಹಾಗೂ ಛಲವಾದಿ ನಾರಾಯಣ ಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆಶ್ರಯದಲ್ಲಿ‌ ಬೆಳೆದಿದ್ದೇವೆ, ಆದರೆ ರಾಜಕೀಯ ಸ್ಥಾನಮಾನದ ಆಸೆಗೆ ಅಂಬೇಡ್ಕರ್ ಅವರ ಸಿದ್ಧಾಂತವನ್ನು ಬಿಟ್ಟಿಲ್ಲ, ಆದರೆ ನಾರಾಯಣಸ್ವಾಮಿ ಅಧಿಕಾರದ ಆಸೆಗೆ ತತ್ವಸಿದ್ಧಾಂತ ಧಿಕ್ಕರಿಸಿ ಬಣ್ಣ ಬದಲಾಯಿಸುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಕೆಪಿಸಿಸಿ ರಾಜ್ಯ ವಕ್ತಾರ ಡಾ‌.ರಝಾಕ ಉಸ್ತಾದ, ಆರ್.ಡಿ.ಎ. ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಅಸ್ಲಂ‌ ಪಾಷಾ, ಅಬ್ದುಲ್ ಕರೀಮ, ಮೊಹಮ್ಮದ ಉಸ್ಮಾನ, ಜಾಹೇದ ಹುಸೇನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.