ರಾಯಚೂರು: ಗೃಹ ಸಾಲ ಕ್ಷೇತ್ರದ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಎಚ್‌ಎಫ್‌ಎಲ್), ರಾಯಚೂರು ಸೇರಿದಂತೆ ಕರ್ನಾಟಕದಲ್ಲಿ ಐದು ಹೊಸ ಶಾಖೆಗಳನ್ನು ಆರಂಭಿಸಿದೆ.
ರಾಯಚೂರು ನಗರದಲ್ಲಿ ಶುಕ್ರವಾರ ನೂತನ ಶಾಖೆಯನ್ನು ಆಧಾರ್ ಹೌಸಿಂಗ್‌ನ ವಲಯ ಮುಖ್ಯಸ್ಥ ಟಿ. ಫಣಿಕುಮಾರ ಉದ್ಘಾಟಿಸಿ ಮಾತನಾಡಿ, ‘ಈ ಭಾಗದಲ್ಲಿ ಕೈಗೆಟಕುವ ವೆಚ್ಚದ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಾಯಚೂರಿನಲ್ಲಿ ನಾವು ಹೊಸ ಶಾಖೆಯನ್ನು ಆರಂಭಿಸಲು ಇದೇ ಕಾರಣವಾಗಿದೆ’ ಎಂದು ತಿಳಿಸಿದರು..
ಆಧಾರ್ ಹೌಸಿಂಗ್ ಫೈನಾನ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ರಿಷಿ ಆನಂದ್ ಮಾತನಾಡಿ, ‘ಹೊಸಪೇಟೆ, ಗದಗ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ನಗರಗಳಲ್ಲಿ ಇಂದು ಸಂಸ್ಥೆ ಹೊಸ ಶಾಖೆಗಳನ್ನು ಆರಂಭಿಸಿದೆ. ಔಪಚಾರಿಕ ಹಣಕಾಸು ದೊರೆಯದ ಗ್ರಾಹಕ ವರ್ಗಕ್ಕೆ ಸಂಸ್ಥೆ ಸುಲಭ ಗೃಹ ಸಾಲವನ್ನು ಒದಗಿಸುತ್ತಿದೆ” ಎಂದರು.
ಸಂಸ್ಥೆಯ ವಹಿವಾಟು ಮುಖ್ಯಸ್ಥರಾದ ಕಿರಣ್ ಕುಮಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.