ಸಾವು (ಪ್ರಾತಿನಿಧಿಕ ಚಿತ್ರ)
ರಾಯಚೂರು: ನಗರ ಹೊರವಲಯದ ಪವರ್‌ಗ್ರಿಡ್‌ನಲ್ಲಿ ಕೆಲಸಕ್ಕಾಗಿ ಸೈಕಲ್ ಮೇಲೆ ಹೊರಟಿದ್ದ ವ್ಯಕ್ತಿಗೆ ಅಸ್ಕಿಹಾಳ ಸಮೀಪ ಹಳ್ಳದ ಬಸವೇಶ್ವರ ದೇಗುಲ ಬಳಿ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮಾಜಿಯೋಧ ಶ್ರೀನಿವಾಸ ರಾವ್ (58) ಎಂದು ಗುರುತಿಸಲಾಗಿದೆ.
ಮೂಲತಃ ಗಂಗಾವತಿಯವರಾದ ಇವರು, ನಗರ ಸಮೀಪದ ಅಸ್ಕಿಹಾಳದಲ್ಲಿ ವಾಸವಾಗಿದ್ದರು. ಸೈಕಲ್ ಮೇಲೆ ಕೆಲಸಕ್ಕೆ ಹೋಗುತ್ತಿದ್ದಾಗ, ರಾಯಚೂರಿನಿಂದ ಲಿಂಗಸುಗೂರು ಮಾರ್ಗವಾಗಿ ಸಾಗುತ್ತಿದ್ದ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.