ADVERTISEMENT

ಏಮ್ಸ್‌ ಬೇಡಿಕೆ: ರಕ್ತ ಸಹಿ ಸಂಗ್ರಹ ಹೋರಾಟ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 14:38 IST
Last Updated 1 ಜುಲೈ 2022, 14:38 IST
ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ರಕ್ತದಿಂದ ಸಹಿ ಮಾಡುವ ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಂಪಣ್ಣ ನೆರವಿ ರಕ್ತದಿಂದ ಸಹಿ ಮಾಡಿದರು.
ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ರಕ್ತದಿಂದ ಸಹಿ ಮಾಡುವ ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಂಪಣ್ಣ ನೆರವಿ ರಕ್ತದಿಂದ ಸಹಿ ಮಾಡಿದರು.   

ರಾಯಚೂರು: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಜಿಲ್ಲೆಯಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಶುಕ್ರವಾರ 50ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಶುಕ್ರವಾರ ಏಮ್ಸ್ ಹೋರಾಟಗಾರರು ರಕ್ತದಿಂದ ಸಹಿ ಮಾಡುವ ಪ್ರತಿಭಟನೆ ಆರಂಭಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಆಗಿದೆ. ಹೋರಾಟದ ಸ್ಥಳಕ್ಕೆ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಂಸದರು ಭೇಟಿ ನೀಡಿದ್ದಾರೆ. ಆದರೆ,ಏಮ್ಸ್ ಬೇಡಿಕೆ ಬಗ್ಗೆ ಸರ್ಕಾರದಲ್ಲಿ ಪ್ರಸ್ತಾಪಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಏಮ್ಸ್ ಸ್ಥಾಪಿಸುವ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳಿಸಬೇಕು. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದರು.

ADVERTISEMENT

ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಂಪಣ್ಣ ಹಾಗೂ ನಗರದ ವಿದ್ಯಾರ್ಥಿಗಳು ನವೋದಯ ವಿದ್ಯಾಸಂಸ್ಥೆಯ ಫಿಜಿಯೋಥೆರಪಿ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯುವಕರು, ಸ್ಪಿನ್ನಿಂಗ್ ಮಿಲ್ ಯರಮರಸ್ ಕಾರ್ಮಿಕ ಸಂಘದವರು ಮತ್ತು ಹಲವಾರು ಸಂಘ ಸಂಸ್ಥೆಗಳು ಬೆಂಬಲಿಸಿ ರಕ್ತದಿಂದ ಸಹಿ ಮಾಡಿದರು.

ಸಮಿತಿಯ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ, ಅಶೋಕ ಕುಮಾರ ಜೈನ್, ವೆಂಕಟೇಶ ಆಚಾರಿ, ಪ್ರಸಾದ್ ಭಂಡಾರಿ, ಮೇದಾರ, ವೀರಹನುಮಾನ, ಶೇಖರ, ಬಾಬುರಾವ್ ಶೇಗುಣಸಿ, ಮಾಸೂಮ್, ಬಸವರಾಜ ಮಿಮಿಕ್ರಿ, ಹುಲಿಗೆಪ್ಪ, ಗುರುರಾಜ, ವೀರಭದ್ರಯ್ಯಸ್ವಾಮಿ, ರಮೇಶಬಾಬು, ಮಹೇಶ ಬಾಬು, ವೀರಭದ್ರಪ್ಪ, ಹುಲಿಗೆಪ್ಪ ಸೇರಿದಂತೆ ನೂರಾರು ಮಹಿಳೆಯರು ಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.