ಸಿರವಾರ: ‘ಜ್ಯೋತಿಯಾತ್ರೆ ಮೂಲಕ ಸಮಾಜವನ್ನು ಒಗ್ಗೂಡಿಸಿದ ಮಹಾನ್ ಚೇತನ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ’ ಎಂದು ಹಡಪದ ಸಮಾಜದ ಮುಖಂಡ ಚಂದ್ರಶೇಖರ ಹಡಪದ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಲಿಂಗೈಕ್ಯ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ 17ನೇ ಪುಣ್ಯ ಸ್ಮರಣೆ ಅಂಗವಾಗಿ ಎಪಿಎಂಸಿ ವೃತ್ತದಲ್ಲಿರುವ ಹಡಪದ ಅಪ್ಪಣ್ಣ ಮತ್ತು ಅಪ್ಪಣ್ಣ ಸ್ವಾಮೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದರು.
ಈ ವೇಳೆ ಹಡಪದ ಸಮಾಜದ ಮುಖಂಡರಾದ ಶಿವಕುಮಾರ, ಅಮರೇಶ ಹಡಪದ, ಬಸವರಾಜ ಹರವಿ, ಬಸವರಾಜ ಚಿಂಚರಕಿ, ಮಲ್ಲಿಕಾರ್ಜುನ, ಭೀಮಣ್ಣ, ಹುಲಿಗೆಪ್ಪ ಸೂರಿ, ಬಸವರಾಜ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.