ರಾಯಚೂರು: ಭೋಯಿ, ಭೋಯೇರ ಸಮುದಾಯದವರು ಕಾನೂನು ಬಾಹಿರವಾಗಿ ಭೋವಿ ಸಮಾಜದ ಜಾತಿ ಪ್ರಮಾಣ ಪಡೆಯುತ್ತಿದ್ದಾರೆ ಎಂದು ಸಿದ್ದರಾಮೇಶ್ವರ ಭೋವಿ (ವಡ್ಡರ) ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಿಗರಿ ಸುಳ್ಳು ಮಾಹಿತಿ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘ ಜಿಲ್ಲಾಧ್ಯಕ್ಷ ವೆಂಕಟೇಶ ಚಿಲಕದ್ ಆಗ್ರಹಿಸಿದರು.
ಜುಲೈ 27ರಂದು ರವಿಕುಮಾರ ಪತ್ರಿಕಾಗೋಷ್ಠಿ ನಡೆಸಿ ‘ ಮಸ್ಕಿಯ ಮೆದಿಕಿನಾಳ, ಬೆನಕನಹಾಳ, ಗೌಡನಭಾವಿ ಸೇರಿ ಹಲವೆಡೆ ಪ್ರವರ್ಗ 1ರಲ್ಲಿ ಬರುವ ಬೋವೇರ, ಭೋಯಿ, ಭೋಯೇರ, ರಾಜಭೋಯಿ ಸಮುದಾಯದವರು ‘ಪರಿಶಿಷ್ಟ ಜಾತಿಯ ಭೋವಿ–ವಡ್ಡರ್’ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇವರು ಭೋವಿ ಜನಾಂಗದವರಲ್ಲ ಎಂದು ತಿಳಿಸಿದ್ದಾರೆ. ಮಸ್ಕಿ ಕಂದಾಯ ಇಲಾಖೆಯ ತಹಶೀಲ್ದಾರ್ ಕಾರ್ಯಲಯಕ್ಕೆ ಹೋಗಿ ಅಲ್ಲಿರುವ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಸಮಾಜ ಸ್ವಾತಂತ್ರ್ಯ ಪೂರ್ವದಿಂದಲೂ ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ಭೋವಿ ಸಮಾಜದವರು ವಾಸ ಮಾಡುತ್ತಿದ್ದು, 1947ಕ್ಕಿಂತ ಮುಂಚೆಯಿಂದಲೂ ನಮ್ಮ ಪೂರ್ವಜರ ಹಿರಿಯರ ಎಲ್ಲಾ ದಾಖಲೆಗಳಲ್ಲಿ ಭೋವಿ ಎಂದು ಜಾತಿ ನಮೂದು ಇದೆ ಹಾಗೂ ಪರಿಶಿಷ್ಟ ಜಾತಿ ಪಟ್ಟಿಗಳಲ್ಲಿ ಇರುವ ಭೋವಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳನ್ನು 1950ರಿಂದಲೂ ಪಡೆಯುತ್ತ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಮಾಜದ ಮುಖಂಡರಾದ ರಮೇಶ ಭೋವಿ, ನಾಗರಾಜ ಭೋವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.