ದೇವದುರ್ಗ: ‘ಉಪ್ಪಾರ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರ ಈ ಸಮುದಾಯಕ್ಕೆ ಹೆಚ್ಚು ರಾಜಕೀಯ ಪ್ರಾಧಾನ್ಯ ನೀಡಬೇಕು’ ಎಂದು ಭಗೀರಥ ಸಮಾಜದ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಒತ್ತಾಯಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕು. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಯಾವುದೇ ಸರ್ಕಾರ ಬಂದರೂ ಮೊದಲಿನಿಂದಲೂ ಉಪ್ಪಾರ ಸಮುದಾಯವನ್ನು ಕಡೆಗಣಿಸುತ್ತ ಬಂದಿವೆ. ಸಮಾಜದ ಜನರು ಸಂಘಟಿತರಾಗಿ ಒಗ್ಗೂಡಿ ಹೋರಾಟ ಮಾಡಬೇಕು’ ಎಂದರು.
ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ನಾಗಪ್ಪ ಉಪ್ಪಾರ, ಮುಕ್ಕಣ್ಣ ವಕೀಲ, ಮೌನೇಶ ಬೂದಿನಾಳ, ಸುರೇಶ, ವೇಂಕೊಬ, ಹನುಮಂತ, ಯಂಕಪ್ಪ, ಮಧುರಂಗಪ್ಪ, ಶಿವಪ್ಪ, ರಂಗಪ್ಪ ಇರಬಗೇರಾ, ತಿರುಪತಿ ಮಾನಸಗಲ್, ಶಿವಪುತ್ರ ಮತ್ತು ಭೀಮರಾಯ ನಾಯಕ ಮೇಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.