ADVERTISEMENT

ರಾಯಚೂರು | ಹಸೆಮಣೆ ಏರಿದ ಅಂಧ ಜೋಡಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:50 IST
Last Updated 12 ಸೆಪ್ಟೆಂಬರ್ 2025, 6:50 IST
ರಾಯಚೂರಿನ ಯರಮರಸ್ ಗ್ರಾಮದಲ್ಲಿ ಬುಧವಾರ ಹಸೆಮಣೆ ಏರಿದ ಅಂಧ ಜೋಡಿಗೆ ಶುಭ ಕೋರಿದ ಗ್ರಾಮಸ್ಥರು
ರಾಯಚೂರಿನ ಯರಮರಸ್ ಗ್ರಾಮದಲ್ಲಿ ಬುಧವಾರ ಹಸೆಮಣೆ ಏರಿದ ಅಂಧ ಜೋಡಿಗೆ ಶುಭ ಕೋರಿದ ಗ್ರಾಮಸ್ಥರು   

ರಾಯಚೂರು: ನಗರ ಹೊರವಲಯದ ಯರಮರಸ್ ಗ್ರಾಮದ ರಂಗಪ್ಪ ಹಾಗೂ ಕೋಲಾರದ ನಾರಾಯಣಮ್ಮ ಮದುವೆಯಾಗಿದ್ದಾರೆ.

ಶನಿವಾರ ಕೋಲಾರದಲ್ಲಿ ಮಾರಮ್ಮ ಹಾಗೂ ಬುಡ್ಡಪ್ಪನವರ ದ್ವಿತೀಯ ಪುತ್ರ ರಂಗಪ್ಪ ಹಾಗೂ ಕೋಲಾರ ಜಿಲ್ಲೆಯ ದೊಡ್ಡಕಲ್ಲಹಳ್ಳಿಯ ಲಕ್ಷ್ಮಮ್ಮ–ಹೊಂಬಾಳಪ್ಪ ಅವರ ಪುತ್ರಿ ನಾರಾಯಣಮ್ಮ ಅವರ ವಿವಾಹವಾಗಿದೆ.

ಯರಮರಸ್‌ನ ವೀರಾಂಜಿನೇಯ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು.

ADVERTISEMENT

ಪಾಲಿಕೆ ಸದಸ್ಯ ನರಸರೆಡ್ಡಿ ಅವರು ಆರತಕ್ಷತೆ ಕಾರ್ಯಕ್ರಮದ ವ್ಯವಸ್ಥೆ ಮಾಡುವ ಮೂಲಕ ಅವರ ಬಾಳಿಗೆ ನೆರವಾದರು. 300 ಜನ ಪಾಲ್ಗೊಂಡು ನವ ದಂಪತಿಗೆ ಆಶೀರ್ವದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.