
ಪ್ರಜಾವಾಣಿ ವಾರ್ತೆ
ಲಿಂಗಸುಗೂರು: ಬಸ್ ಹರಿದು ಬಾಲಕನೊಬ್ಬ ಮೃತಪಟ್ಟು ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯಗಳಾದ ಘಟನೆ ಪಟ್ಟಣದಲ್ಲಿ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ಗಂಗಾವತಿ-ಯಾದಗಿರಿ ಮಾರ್ಗದ ಬಸ್ ಗಂಗಾವತಿಯಿಂದ ಬಂದು ಪಟ್ಟಣದ ಬಸ್ ನಿಲ್ದಾಣದಿಂದ ಯಾದಗಿರಿ ತೆರಳುತ್ತಿರುವಾಗ ಚಾಲಕನ ನಿರ್ಲಕ್ಷ್ಯದಿಂದ ಹಾಗೂ ಅತಿ ವೇಗದಿಂದ ಬಸ್ ನಿಲ್ದಾಣದಲ್ಲಿದ್ದ ಸಿದ್ಧರಾಮ ಬಸವರಾಜ ಕೊಡಗುಂಟಿ (11), ಧನಂಜಯ ಬಸವರಾಜ ಕೊಡಗುಂಟಿ(8) ಮೇಲೆ ಹರಿದಿದೆ. ಪರಿಣಾಮ ಸಿದ್ಧರಾಮ ಸ್ಥಳದಲ್ಲಿ ಸಾವುನ್ನಪ್ಪಿದ್ದಾನೆ.
ಧನಂಜಯನ ಎರಡು ಕೈಗಳ ಮೇಲೆ ಬಸ್ ಹಾದು ಹೋಗಿದ್ದರಿಂದ ಕೈಗಳು ಕಟ್ ಆಗಿ ಆತನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕ ಕಳಕಪ್ಪ ಹೊಸಳ್ಳಿ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.