
ರಾಯಚೂರು: ‘ರಾಯಚೂರು ಜಿಲ್ಲೆಯಲ್ಲಿ ಬಜ್ ಇಂಡಿಯಾ ಟ್ರಸ್ಟ್ ಜೊತೆಗೆ ಸೇರಿ ಮಾಡಿದ ಕೆಲಸ ಸಂತೋಷ ತಂದಿದೆ. ಬಜ್ ತರಬೇತಿಗಳಿಂದ ಮಹಿಳೆಯರಲ್ಲಿ ತುಂಬಾ ಮಹತ್ವಪೂರ್ಣ ಬೆಳವಣಿಗೆಗೆಳು ಆಗಿದ್ದು, ಅವರ ಭವಿಷ್ಯ ಇನ್ನೂ ಉತ್ತಮವಾಗಲಿ’ ಎಂದು ಬಜ್ ಸಂಸ್ಥೆಯ ಸಿಇಒ ಉತ್ತರ ನಾರಾಯಣ ಹಾರೈಸಿದರು.
ಬಜ್ ಇಂಡಿಯಾ ಟ್ರಸ್ಟ್ , ಕ್ರೆಡಿಟ್ ಎಕ್ಸೆಸ್ ಇಂಡಿಯಾ ಫೌಂಡೇಶನ್, ಗ್ರಾಮೀಣ ಕೂಟ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ನಡೆದ ಬಜ್ ಗೆಳತಿ ಸಮಾಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಲ ಮಾಡುವುದು ತಪ್ಪಲ್ಲ. ಆದರೆ ಮಾಡಿದ ಸಾಲವನ್ನು ಅಭಿವೃದ್ಧಿಗಾಗಿ ಬಳಸದೇ, ಮರುಪಾವತಿ ಮಾಡದೇ ಇರುವುದು ಬಹುದೊಡ್ಡ ತಪ್ಪು. ಮಹಿಳೆಯರು ತಮ್ಮ ಸಾಮರ್ಥ್ಯ ಅರ್ಥ ಮಾಡಿಕೊಳ್ಳಬೇಕು. ಕಲಿತು ಮುಂದೆ ಬರಬೇಕು’ ಎಂದು ತಿಳಿಸಿದರು.
ಕ್ರೆಡಿಟ್ ಎಕ್ಸೆಸ್ ಇಂಡಿಯಾ ಫೌಂಡೇಶನ್ ಪ್ರಧಾನ ನಿರ್ವಹಣಾ ಅಧಿಕಾರಿ ಸತೀಶ್ ರಾವ್ ಮಾತನಾಡಿ, ‘ಮಹಿಳೆಯರು ಸಿಎಐಎಫ್ ನೀಡುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶರಣಮ್ಮ ಮಾತನಾಡಿದರು.
ಬಜ್ ಗೆಳತಿಯರಾದ ರೇಖಾ, ಬಾಲಜ್ಯೋತಿ, ಲಲಿತಾ, ಲಕ್ಷ್ಮಿ ಅನಿಸಿಕೆಗಳನ್ನು ಹಂಚಿಕೊಂಡರು. ಅತಿಥಿಗಳು ಮಹಿಳೆಯರು ಸಿದ್ಧಪಡಿಸಿದ ಉತ್ಪನ್ನಗಳ ಪ್ರದರ್ಶನ ವೀಕ್ಷಿಸಿದರು.
ಶಿವಲಿಂಗಪ್ಪ, ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಶರಣಪ್ಪ, ರಿಜನಲ್ ಮ್ಯಾನೇಜರ್, ಸುರೇಶ, ಎಲ್ ಮತ್ತು ಡಿ ಮ್ಯಾನೇಜರ್ , ಅಜ್ಜೇನಗೌಡ, ನರೆನ್, ಭುವನೇಶ್ವರಿ ಮತ್ತು ಶಹನಾಜ್ ಉಪಸ್ಥಿತರಿದ್ದರು. ಭಾರತಿ ಬಿಜಾಪುರ ಸ್ವಾಗತಿಸಿದರು. ಅಜೇಯ್ ಕೊರಡೂರ ನಿರೂಪಿಸಿದರು. ಮುತ್ತಪ್ಪ ಬಾಗೇವಾಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.