ಸಿಂಧನೂರು: ‘ಮೊಹರಂ ಅನ್ನು ಎಲ್ಲ ಜಾತಿ, ಧರ್ಮದವರು ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದಿಂದ ಆಚರಿಸಬೇಕು’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ ಹೇಳಿದರು.
ಸ್ಥಳೀಯ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಶುಕ್ರವಾರ ಸಂಜೆ ಮೊಹರಂ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜೂನ್ 28ರಂದು ಅಲಾಯಿ ದೇವರುಗಳ ಪಂಜಾಗಳ ಸ್ಥಾಪನೆಯೊಂದಿಗೆ ಮೊಹರಂ ಆಚರಣೆ ಕಳೆಗಟ್ಟಲಿದೆ. ಜುಲೈ 5ರಂದು ಕತಲ್ ರಾತ್ರಿ ಹಾಗೂ ಜುಲೈ 6ರಂದು ದಫನ್ ಆಚರಣೆ ನಡೆಯಲಿದೆ. ಹಿಂದೂ-ಮುಸ್ಲಿಮರು ಒಗ್ಗೂಡಿ ಮೊಹರಂ ಆಚರಿಸಬೇಕು. ಅಲಾಯಿ ದೇವರು ಕೂರಿಸುವವರು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು, ಇಲಾಖೆ ಸೂಚಿಸುವ ನಿಯಮಗಳಿಗೆ ಬದ್ಧರಾಗಿರಬೇಕು’ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಮುಸ್ಲಿಂ ಸಮಾಜದ ಮುಖಂಡರಾದ ಅಜೀಜ್, ಅಯ್ಯೂಬ್‍ಖಾನ್, ಶಫ್ಪುವುಲ್ಲಾ ಖಾನ್, ವೀರಶೈವ ಪಂಚಮಸಾಲಿ ಸಮಾಜದ ನಗರ ಘಟಕದ ಅಧ್ಯಕ್ಷ ನಾಗರಾಜ್ ಗಸ್ತಿ ಮಾತನಾಡಿದರು. ಹೆಡ್‌ಕಾನ್‍ಸ್ಟೆಬಲ್ ಸೋಮನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈದ್ಗಾ ಕಮಿಟಿ ಅಧ್ಯಕ್ಷ ಸೈಯ್ಯದ್ ಹಾರೂನ್‍ಸಾಬ್ ಜಾಗೀರದಾರ್, ಕರ್ನಾಟಕ ಮುಸ್ಲಿಂ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಹ್ಮದ್ ಫಯಾಜ್ ಅಹ್ಮದ್, ಮುಖಂಡರಾದ ಮುಸ್ತಫಾ ಜುವೆಲರ್ಸ್, ದಾವಲಸಾಬ್ ದೊಡ್ಮನಿ, ಹನುಮಂತ ಕಲ್‍ಶೆಟ್ಟಿ, ಅಮೀನಸಾಬ್ ನದಾಫ್, ಹಬೀಬ್ ಖಾಜಿ, ಯೂಸೂಫ್ ಏತ್ಮಾರಿ, ಚಂದಪ್ಪ, ಶರೀಫ್, ಮಹಿಬೂಬ್ ಉಪಸ್ಥಿತರಿದ್ದರು. ಎಎಸ್‍ಐ ವೀರೇಶ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.