ADVERTISEMENT

ರಾಯಚೂರು | ಬಾಲಕಿ ಜತೆಗೆ ಮದುವೆ: ‘ತಾತಪ್ಪ’ನ ಬಂಧನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:47 IST
Last Updated 4 ಆಗಸ್ಟ್ 2025, 7:47 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ರಾಯಚೂರು: ಬಾಲಕಿಯನ್ನು ವಿವಾಹವಾಗಿದ್ದ ಆರೋಪದ ಮೇರೆಗೆ ಇಲ್ಲಿನ ಶಕ್ತಿ ನಗರದ ತಾತಪ್ಪ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಸಮೀಪದ ಗುರ್ಜಾಪುರ ಸೇತುವೆ ಬಳಿ ಇತ್ತೀಚೆಗೆ ತಾತಪ್ಪ ಕೃಷ್ಣಾ ನದಿಯಲ್ಲಿ ಬಿದ್ದಿದ್ದ ಘಟನೆ ನಡೆದಿತ್ತು. ನಂತರ ತಾತಪ್ಪ ಬಾಲ್ಯವಿವಾಹವಾಗಿದ್ದು ಗೊತ್ತಾಗಿತ್ತು.

ADVERTISEMENT

ತಾತಪ್ಪ ನದಿಗೆ ಬಿದ್ದಿದ್ದ ವಿಷಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡಿತ್ತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬಾಲ್ಯವಿವಾಹದ ಸಂಶಯ ವ್ಯಕ್ತಪಡಿಸಿ, ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿತ್ತು.

ಆಯೋಗದ ಸೂಚನೆಯಂತೆ ಅಪ್ರಾಪ್ತೆ ಓದಿರುವ ಶಾಲಾ ದಾಖಲಾತಿ ಪರಿಶೀಲನೆ ಮಾಡಿದಾಗ ತಾತಪ್ಪ ಬಾಲ್ಯವಿವಾಹವಾಗಿದ್ದು ಬಹಿರಂಗವಾಗಿತ್ತು.

ಆಯೋಗದ ಸದಸ್ಯ ಶಶಿಧರ ಕೋಸಂಬೆ, ಘಟನೆ ಹಿನ್ನೆಲೆ ಆಧರಿಸಿ ಪೋಕ್ಸೊ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಯಾದಗಿರಿ ಹಾಗೂ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.