ಕವಿತಾಳ: ಹತ್ತಿ ಬೆಳೆಗೆ ಕೀಟ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿರೇಹಣಿಗಿ ಗ್ರಾಮದ ಬಸವರಾಜ ಸ್ವಾಮಿ ಅವರ ಜಮೀನಿಗೆ ಕೃಷಿ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
‘ಹತ್ತಿ ಬೆಳೆಗೆ ಒಣಕೆ ಬಂಡಿ ಹುಳು ಕಾಟ’ ಶೀರ್ಷಿಕೆಯಡಿ ʼಪ್ರಜಾವಾಣಿʼಯ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
‘ಒಣ ಭೂಮಿ ಬೆಳೆಗಳಲ್ಲಿ ಸಾಮಾನ್ಯವಾಗಿ ಈ ಸಮಸ್ಯೆ ಕಂಡು ಬರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಕೀಟ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಿಸುವಂತೆ ಸಲಹೆ ನೀಡಲಾಗಿದೆ’ ಎಂದು ಕೃಷಿ ಸಹಾಯಕ ಅಧಿಕಾರಿ ಶಿವಶರಣ ಭೋವಿ ತಿಳಿಸಿದರು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರಜ್ವಲಕುಮಾರ, ರೈತ ಬಸವರಾಜಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಒಣಕೆ ಬಂಡಿ ಹುಳು ಬೆಳೆಗೆ ಬಹುತೇಕ ಹಾನಿ ಮಾಡುವುದಿಲ್ಲ. ನೈಸರ್ಗಿಕ ಆಹಾರ ಸಿಗದೆ ಹತ್ತಿ ಮೊಳಕೆಗೆ ಹಾನಿ ಮಾಡಿರುವ ಸಾಧ್ಯತೆ ಇದೆ. ಸಂಪೂರ್ಣ ಬೆಳೆ ನಾಶಪಡಿಸುವ ಅಗತ್ಯವಿಲ್ಲಶಿವಶರಣ ಭೋವಿ, ಸಹಾಯಕ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.