ADVERTISEMENT

ಕೋವಿಡ್‌: ಗುಣಮುಖವಾದ 101 ಜನರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:51 IST
Last Updated 12 ಅಕ್ಟೋಬರ್ 2020, 14:51 IST

ರಾಯಚೂರು:ಜಿಲ್ಲೆಯಲ್ಲಿ ಸೋಮವಾರ ಮತ್ತೆ 44 ಜನರಿಗೆಕೋವಿಡ್‌ ದೃಢವಾಗಿದೆ.ಇದೇ ವೇಳೆ,ಕೋವಿಡ್‌ನಿಂದ ಗುಣಮುಖರಾಗಿದ್ದ 101 ಜನರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ 937 ಸಕ್ರಿಯ ಪ್ರಕರಣಗಳಿವೆ.

ಇದುವರೆಗೂ ಒಟ್ಟು 12,602 ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಗುಣಮುಖರಾದವರು ಒಟ್ಟು 11,488 ಜನರು.ಕೋವಿಡ್‌ನಿಂದ ಇದುವರೆಗೂ ಒಟ್ಟು 142 ಜನರು ಮೃತಪಟ್ಟಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ 6 ಜನರನ್ನು ಒಪೆಕ್‌ಗೆ ದಾಖಲಿಸಲಾಗಿದ್ದು, ಒಟ್ಟು 236 ಜನರು ಆಸ್ಪತ್ರೆಯಲ್ಲಿದ್ದಾರೆ. ಒಟ್ಟು 1630 ಮಾದರಿಗಳ ವರದಿ ಬರಬೇಕಿದೆ. ಇದುವರೆಗೂ ಒಟ್ಟು 1,35,194 ಜನರಿಂದ ಗಂಟಲು ದ್ರವ ಸಂಗ್ರಹಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.