ADVERTISEMENT

ಮೊದಲ ದಿನ ₹2.5 ಕೋಟಿ ಮದ್ಯ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಮೇ 2020, 15:00 IST
Last Updated 5 ಮೇ 2020, 15:00 IST
ಪ್ರಶಾಂತಕುಮಾರ್‌
ಪ್ರಶಾಂತಕುಮಾರ್‌   

ರಾಯಚೂರು: ಕಳೆದ 50 ದಿನಗಳಿಂದ ಮದ್ಯ ಮಾರಾಟ ನಿಷೇಧದಿಂದ ಅಸಂತುಷ್ಟರಾಗಿದ್ದ ಮದ್ಯಪ್ರಿಯರು, ಲಾಕ್‌ಡೌನ್‌ ಸಡಿಲಿಕೆಗೊಳಿಸಿ ಮದ್ಯಮಾರಾಟ ಆರಂಭಿಸಿದ ಮೊದಲ ದಿನ ಜಿಲ್ಲೆಯಲ್ಲಿ ₹2.5 ಕೋಟಿ ಮೌಲ್ಯದ ಮದ್ಯ ಖರೀದಿಸಿದ್ದಾರೆ.

31 ಎಂಎಸ್‌ಐಎಲ್‌ ಸೇರಿದಂತೆ 123 ಮದ್ಯದಂಗಡಿಗಳನ್ನು ತೆರೆದು, ಹಳೇ ದಾಸ್ತಾನು ಮಾರಾಟ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಒಟ್ಟು 5,800 (52,200 ಲೀಟರ್‌) ಬಾಕ್ಸ್‌ ಮದ್ಯ ಮತ್ತು 1,650 ಬೀಯರ್‌ ಬಾಕ್ಸ್‌ (13,200 ಲೀಟರ್‌) ಮಾರಾಟವಾಗಿದ್ದು, ಮದ್ಯಪ್ರಿಯರು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೂ ಎಡೆಬಿಡದೆ ಖರೀದಿಸಿಕೊಂಡು ಹೋಗಿದ್ದಾರೆ. ಮಂಗಳವಾರದಿಂದ ಮದ್ಯದಂಗಡಿಗಳಿಗೆ ಹೊಸ ಬಾಕ್ಸ್‌ಗಳನ್ನು ಪೂರೈಸಲಾಗಿದ್ದು, ಪರಿಸ್ಕೃತ ದರಗಳನ್ನು ಅನ್ವಯಿಸಲಾಗಿದೆ. ಶೇ 6 ರಷ್ಟು ದರ ಹೆಚ್ಚಳವಾಗಿದೆ.

ಚಂದ್ರಬಂಡಾದಲ್ಲಿದ್ದ ಎಂಎಸ್‌ಐಎಲ್‌ ಸೇರಿದಂತೆ ರಾಯಚೂರು ತಾಲ್ಲೂಕಿನ ಗಡಿಭಾಗದ ಐದು ಮದ್ಯದಂಗಡಿಗಳನ್ನು ಬಂದ್‌ ಮಾಡಿಸಲಾಗಿದೆ. ಮಂಗಳವಾರದಿಂದ ಮದ್ಯದಂಗಡಿಗಳು ಬೆಳಿಗ್ಗೆ 8 ರಿಂದ ಮಧ್ಯಾಹ್ನ2 ಗಂಟೆವರೆಗೂ ಮಾತ್ರ ತೆರೆದುಕೊಳ್ಳಲಿವೆ ಎಂದು ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ಪ್ರಶಾಂತಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.