ADVERTISEMENT

ನವರಾತ್ರಿ ಉತ್ಸವ: ಉಡಿ ತುಂಬುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:30 IST
Last Updated 8 ಅಕ್ಟೋಬರ್ 2024, 14:30 IST
ಸಿರವಾರದ ಕಾಳಿಕಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು
ಸಿರವಾರದ ಕಾಳಿಕಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು   

ಸಿರವಾರ: ನವರಾತ್ರಿ ಉತ್ಸವದ ಅಂಗವಾಗಿ ಪಟ್ಟಣದ ಶ್ರೀರಾಮ ನಗರದ ಕಾಳಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ದೇವಸ್ಥಾನದಲ್ಲಿ ಪ್ರತಿನಿತ್ಯ ಕುಂಕುಮಾರ್ಚನೆ, ಪುಷ್ಪಾರ್ಚನೆ, ಬಿಲ್ವಾರ್ಚನೆ, ನೈವೇದ್ಯ ಅರ್ಪಣೆ ಕಾರ್ಯಗಳು ನಡೆಯುತ್ತಿವೆ. ದೇವಿ ಮೂರ್ತಿಗೆ ವಿವಿಧ ಹೂವಿನ ಅಲಂಕಾರವನ್ನು ಮಾಡಲಾಗುತ್ತಿದೆ. ಮಂಗಳವಾರ ಕಾಳಿಕಾ ದೇವಿ ಮೂರ್ತಿಗೆ ವಿಶೇಷವಾಗಿ ಸಿಂಗರಿಸಿ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಉಡಿ ತುಂಬಲಾಯಿತು.

ದೇವಸ್ಥಾನದ ಅರ್ಚಕ ಬಸವರಾಜ ಆಚಾರಿ ವಿಶ್ವಕರ್ಮ, ಶಾಂತಮ್ಮ ಕಂಬಾರ, ಪರಿಮಳಾ ವಿಶ್ವಕರ್ಮ, ಸಂಜನಾ ಕಂಬಾರ, ಲಕ್ಷ್ಮಿ ಕಂಬಾರ, ಸುವರ್ಣ ಕಂಬಾರ, ಶ್ರೀದೇವಿ ಕಂಬಾರ, ಪಲ್ಲವಿ ಪತ್ತಾರ್, ಲತಾ ಪತ್ತಾರ್ ಸೇರಿದಂತೆ ಶ್ರೀರಾಮನಗರದ ಮಹಿಳೆಯರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.