ADVERTISEMENT

ದೇವದುರ್ಗ | ಬೈಕ್‌ಗೆ ಶಾಸಕಿಯ ಪುತ್ರಿಯ ಕಾರು ಡಿಕ್ಕಿ: ಸವಾರನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 16:28 IST
Last Updated 3 ಏಪ್ರಿಲ್ 2025, 16:28 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ದೇವದುರ್ಗ: ತಾಲ್ಲೂಕಿನ ಮಿಯ್ಯಾಪುರ ಕ್ರಾಸ್ ಹತ್ತಿರ ಶಾಸಕಿ ಕರೆಮ್ಮ ಜಿ.ನಾಯಕ ಅವರ ಪುತ್ರಿ ಗೌರಿ ಅವರಿಗೆ ಸೇರಿದ ಕಾರು ಬೈಕ್ ಸವಾರನಿಗೆ ಬುಧವಾರ ಡಿಕ್ಕಿ ಹೊಡೆದ ಪರಿಣಾಮ ಆಂಧ್ರಪ್ರದೇಶ ಮೂಲದ ಬೈಕ್ ಸವಾರ ಕೊಮಿಶೆಟ್ಟಿ ಕೃಷ್ಣ (40) ಅವರ ತಲೆಗೆ ಗಂಭೀರ ಗಾಯವಾಗಿದೆ.

ADVERTISEMENT

ಗಾಯಗೊಂಡ ಕೃಷ್ಣ ಅವರು ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಆಸ್ಪತ್ರೆಯ ಖರ್ಚು ಭರಿಸುವ ಭರವಸೆ ನೀಡಿ ತೆರಳಿದ ಶಾಸಕಿಯ ಪುತ್ರಿ ಆಸ್ಪತ್ರೆ ಕಡೆ ಬಂದಿಲ್ಲ’ ಎಂದು ಅಪಘಾತಕ್ಕೊಳಗಾದ ಕೃಷ್ಣ ಅವರ ಸಂಬಂಧಿಕರು ತಿಳಿಸಿದ್ದಾರೆ.

ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.