ನಾಗರ ಹಾವು
ದೇವದುರ್ಗ: ತಾಲ್ಲೂಕಿನ ಹೇರುಂಡಿ ಗ್ರಾಮದಲ್ಲಿ ಹಾವು ಕಚ್ಚಿ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿ ತಾಯಿ ಸುಬ್ಬಮ್ಮ (35), ಪುತ್ರ ಬಸವರಾಜ (10) ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದೆ. ಮನೆಯಲ್ಲಿದ್ದ ಉಳಿದವರು ಬೇರೆ ಕಡೆ ಮಲಗಿದ್ದರು.
ಮೃತ ಸುಬ್ಬಮ್ಮ ಅವರಿಗೆ ಪತಿ ಮತ್ತು ಇನ್ನೊಬ್ಬ ಮಗ ಇದ್ದಾರೆ.
ಸ್ವಗ್ರಾಮ ಹೇರುಂಡಿಯಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವರಾಜ, ಸುಬ್ಬಮ್ಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.