ADVERTISEMENT

ಭೂಪುರದಲ್ಲಿ ದ್ಯಾಮಮ್ಮದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 15:46 IST
Last Updated 13 ಏಪ್ರಿಲ್ 2024, 15:46 IST
ಲಿಂಗಸುಗೂರು ತಾಲ್ಲೂಕು ಭೂಪುರದಲ್ಲಿ (ರಾಂಪುರ) ಪ್ರತಿಷ್ಠಾಪಿತಗೊಂಡಿರುವ ದ್ಯಾಮಮ್ಮ ದೇವಿ ಮೂರ್ತಿಗೆ ಭಕ್ತರು ಸೀರೆ ಉಡಿಸಿ, ಉಡಿ ತುಂಬುತ್ತಿರುವುದು
ಲಿಂಗಸುಗೂರು ತಾಲ್ಲೂಕು ಭೂಪುರದಲ್ಲಿ (ರಾಂಪುರ) ಪ್ರತಿಷ್ಠಾಪಿತಗೊಂಡಿರುವ ದ್ಯಾಮಮ್ಮ ದೇವಿ ಮೂರ್ತಿಗೆ ಭಕ್ತರು ಸೀರೆ ಉಡಿಸಿ, ಉಡಿ ತುಂಬುತ್ತಿರುವುದು   

ಲಿಂಗಸುಗೂರು: ತಾಲ್ಲೂಕಿನ ಭೂಪುರದಲ್ಲಿ (ರಾಂಪುರ) ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

ಯುಗಾದಿ ಪಾಡ್ಯದ ಮೂರನೇ ದಿನಕ್ಕೆ ಮಾವಿನಭಾವಿ ಗ್ರಾಮದಿಂದ ದ್ಯಾಮಮ್ಮ ದೇವಿ ಮೂರ್ತಿ ಬರಮಾಡಿಕೊಂಡು ಬಾಜಾ–ಭಜಂತ್ರಿ ಸಮೇತ ಸ್ವಾಗತಿಸಿ ದೇವರ ಕಟ್ಟೆ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ.

ಗುರುವಾರದಿಂದ ಆರಂಭಗೊಂಡ ಜಾತ್ರೆ ಭಾನುವಾರಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಮಧ್ಯೆ ಪ್ರತಿನಿತ್ಯ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದು ವಿಶೇಷ.

ADVERTISEMENT

ಮೂರು ದಿನಗಳ ಕಾಲ ಮನೆ ಮನೆಗಳಲ್ಲಿ ಅಲಂಕಾರ, ಬೀದಿಗಳಲ್ಲಿ ತಳಿರು–ತೋರಣ, ರಂಗೋಲಿ ಬಿಡಿಸುವುದು ಸೇರಿದಂತೆ ಹೊಸ ಬಟ್ಟೆ ಧರಿಸಿ ಬೀಗರು ಬಿಜ್ಜರ ಜೊತೆ ಭಕ್ತರು ಸಂಭ್ರಮಿಸಿದರು.

ಭಾನುವಾರ ಸಾಂಪ್ರದಾಯಿಕವಾಗಿ ನಾಲ್ಕನೆ ದಿನ ಗ್ರಾಮಸ್ಥರು ಮಾವಿನಭಾವಿಯ ಪ್ರಮುಖರ ಜೊತೆ ಸೇರಿ ಭವ್ಯ ಮೆರವಣಿಗೆ ಮೂಲಕ ಬೀಳ್ಕೊಟ್ಟು ಭಕ್ತಿ ಭಾವ ಮೆರೆಯುವುದು ವಾಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.