ADVERTISEMENT

ಲಿಂಗಸುಗೂರು | ಮಣ್ಣೆತ್ತಿನ ಅಮಾವಾಸ್ಯೆ: ತಯಾರಿ ಜೋರು

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:45 IST
Last Updated 23 ಜೂನ್ 2025, 15:45 IST
ಲಿಂಗಸುಗೂರು ಸಮೀಪದ ಕರಡಕಲ್ ಗ್ರಾಮದ ಸಿದ್ದಲಿಂಗಪ್ಪ ಕುಂಬಾರ ಅವರು ಮಣ್ಣೆತ್ತು ತಯಾರಿಸುತ್ತಿರುವುದು
ಲಿಂಗಸುಗೂರು ಸಮೀಪದ ಕರಡಕಲ್ ಗ್ರಾಮದ ಸಿದ್ದಲಿಂಗಪ್ಪ ಕುಂಬಾರ ಅವರು ಮಣ್ಣೆತ್ತು ತಯಾರಿಸುತ್ತಿರುವುದು   

ಲಿಂಗಸುಗೂರು: ಬುಧವಾರ (ಜೂನ್ 25) ತಾಲ್ಲೂಕಿನಾದ್ಯಂತ ಆಚರಿಸುವ ಮಣ್ಣೆತ್ತಿನ ಅಮವಾಸ್ಯೆಗೆ ಮಣ್ಣಿನ ಎತ್ತುಗಳ ತಯಾರಿಸಿ ಮಾರಾಟಕ್ಕೆ ಭರದ ಸಿದ್ಧತೆ ನಡೆಸಿದ್ದಾರೆ.

ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಸಿದ್ಧಲಿಂಗಪ್ಪ ಕುಂಬಾರ ಹಾಗೂ ಅವರ ಕುಟಂಬಸ್ಥರು ಹುತ್ತದ ಮಣ್ಣು ತಂದು ಹದವಾಗಿಸಿ ಮಣ್ಣೆತ್ತುಗಳನ್ನು ತಯಾರಿಸುತ್ತಿದ್ದು, ಅವುಗಳನ್ನು ಪಟ್ಟಣದ ನಿವಾಸಿಗಳು ಖರೀದಿಸಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.

ಜೋಡಿ ಎತ್ತುಗಳಿಗೆ ₹50 ರಿಂದ ₹150ವರೆಗೆ ದರ ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ಇತ್ತೀಚಿಗೆ ಪಿಒಪಿಯಿಂದ ತಯಾರಿಸಿದ ಎತ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದರೂ ಆದರೆ ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಬೇಡಿಕೆ ಹೆಚ್ಚು, ಗ್ರಾಮೀಣ ಭಾಗದಲ್ಲಿ ಮಣ್ಣೆತ್ತುಗಳನ್ನು ಯುವಕರು, ಮಕ್ಕಳು ತಾವೇ ತಯಾರಿಸಿ, ಮನೆಯ ಜಗುಲಿ ಮೇಲೆ ಇಟ್ಟು ಪೂಜಿಸುತ್ತಾರೆ. ನಂತರ ಅಮವಾಸ್ಯೆ ಮಾರನೆ ದಿನ ದೇವಸ್ಥಾದ ದ್ವಾರ ಬಾಗಿಲಿಗೆ ಕರಿ ಕಟ್ಟಿ ಮಣ್ಣೆತ್ತು ಕೈಯಲ್ಲಿ ಹಿಡಿದು ಕರಿ ಕಡಿಯುವುದು ವಾಡಿಕೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.