ADVERTISEMENT

ಚುನಾವಣೆ: ಯಾರಿಗೂ ಸಿಗದ ‘ಬಿ ಫಾರಂ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 12:50 IST
Last Updated 13 ಡಿಸೆಂಬರ್ 2021, 12:50 IST

ಸಿರವಾರ: ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನ. ಇನ್ನೂ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಮೂರು ಪಕ್ಷಗಳಲ್ಲಿ ಯಾವ ಅಭ್ಯರ್ಥಿಗಳಿಗೂ ‘ಬಿ ಫಾರಂ’ ನೀಡಿಲ್ಲ. ಆದ್ದರಿಂದ ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದೆ.

ಡಿ.8 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದರೂ ಶನಿವಾರದವರೆಗೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.

ಸೋಮವಾರ ಒಂದೇ ದಿನ ವಿವಿಧ ವಾರ್ಡ್‌ಗಳಿಂದ 31 ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

7,8,16,17,19 ವಾರ್ಡ್‌ಗಳಿಗೆ ತಲಾ ಮೂವರು, 1,3,5,6,14 ನೇ ವಾರ್ಡ್‌ಗಳಿಗೆ ತಲಾ ಇಬ್ಬರು, 9,10,11,13,15,18 ವಾರ್ಡ್‌ಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ‌. 2,4,12,20 ವಾರ್ಡ್‌ಗಳಿಗೆ ಯಾವ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ.

‘ಬಿ ಫಾರಂ’ ಪಡೆಯಲು ಅಭ್ಯರ್ಥಿಗಳ ಹರಸಾಹಸ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಲ್ಲಿ ಕೆಲವು ವಾರ್ಡ್‌ಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸ ಲಾಗಿದೆ. ಬಹಳಷ್ಟು ವಾರ್ಡ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವುದರಿಂದ ಪಕ್ಷದ ‘ಬಿ ಫಾರಂ’ ಗಾಗಿ ಕೊನೆಯ ದಿನವಾದ ಡಿ.15 ರವರೆಗೂ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.