ADVERTISEMENT

‘ಜಾತಿಗಣತಿಯಲ್ಲಿ ಛಲವಾದಿ ಎಂದು ನಮೂದಿಸಿ’

ಸುದ್ದಿಗೋಷ್ಠಿಯಲ್ಲಿ ಮಹಾಂಕಾಳೆಪ್ಪ ಮಲ್ಲಾಪುರ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2025, 14:40 IST
Last Updated 4 ಮೇ 2025, 14:40 IST

ಸಿಂಧನೂರು: ಪರಿಶಿಷ್ಟ ಜಾತಿಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪ್ರಮಾಣ ಹಂಚಿಕೆಗಾಗಿ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ಮೇ 5ರಿಂದ 17ರವರೆಗೆ ನಡೆಸಲಿದೆ. ಈ ಸಂದರ್ಭದಲ್ಲಿ ಬಲಗೈಗೆ ಸಂಬಂಧಿಸಿದ 37 ಉಪ ಜಾತಿಗಳಿಗೆ ಸೇರಿದವರು ತಮ್ಮ ಉಪಜಾತಿ ಎದುರು ಕಡ್ಡಾಯವಾಗಿ ಛಲವಾದಿ ಎಂದು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂಕಾಳೆಪ್ಪ ಮಲ್ಲಾಪುರ ಮನವಿ ಮಾಡಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದಂತೆ 101ರಲ್ಲಿ 37 ಉಪಜಾತಿಗಳು ಛಲವಾದಿ ಸಮುದಾಯಕ್ಕೆ ಅನ್ವಯಿಸುತ್ತವೆ. ಆದ್ದರಿಂದ ನಮ್ಮ ಸಮಾಜದವರು ಛಲವಾದಿ ಎಂದು ಜಾತಿಗಣತಿಯಲ್ಲಿ ಬರೆಯಿಸಬೇಕು. ರಾಜ್ಯ ಸರ್ಕಾರವು ಯಾವುದೇ ಜಾತಿಗಳಿಗೆ ಅನ್ಯಾಯ ಆಗದಂತೆ ಮೀಸಲಾತಿಯನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಕುಬೇರಪ್ಪ ಹೊಸಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಚಾಮುಂಡೇಶ್ವರಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.