ADVERTISEMENT

‘ಸಂವಿಧಾನದಿಂದ ಸರ್ವರಿಗೂ ಸಮ ಬಾಳು’

ಸಂವಿಧಾನ ಸಮರ್ಪಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:36 IST
Last Updated 27 ನವೆಂಬರ್ 2025, 5:36 IST

ರಾಯಚೂರು: ‘ಭಾರತ ಸಂವಿಧಾನ ಸ್ವಾತಂತ್ರ್ಯ, ಸಮಾನತೆ,  ಭ್ರಾತೃತ್ವ ತತ್ವಗಳ ಆಶಯಗಳ ಮೇಲೆ ನಿಂತಿದೆ. ಅದರ ಅಡಿಯಲ್ಲಿ  ಭಾರತೀಯರಾದ ನಾವೆಲ್ಲ ಸಮಾನ ಅವಕಾಶಗಳನ್ನು ಪಡೆದು ಸೌಹಾರ್ದತೆಯಿಂದ ಬದುಕಲು  ಸಾಧ್ಯವಾಗಿದೆ’ ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ್ ಬೇವಿನಬೆಂಚಿ ಹೇಳಿದರು.

ಆಕಾಶವಾಣಿಯಲ್ಲಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ತಾಂತ್ರಿಕ ವಿಭಾಗದ ಮುಖ್ಯಸ್ಥ ಅರವಿಂದಾಕ್ಷಣ ಹಾಗೂ ತಾಂತ್ರಿಕ ವಿಭಾಗದ ಅರಸು, ಶರಣಬಸಪ್ಪ, ಆಡಳಿತ ವಿಭಾಗದ ನಾಗಮಣಿ, ಉದ್ಘೋಷಕ ಶ್ರೀನಿವಾಸ ಕುಲಕರ್ಣಿ, ರೂಪಾ ದೇಸಾಯಿ, ರಮಾ ಕುಲಕರ್ಣಿ, ವೀರೇಶ, ನರೇಂದ್ರ ನಾಗರಾಜ ಉಪಸ್ಥಿತರಿದ್ದರು.

ADVERTISEMENT

‘ವೈವಿಧ್ಯತೆಯಲ್ಲಿ ಏಕತೆ’: 

ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ಎಸ್‌ಇಆರ್‌ಡಿ ಸೊಸೈಟಿಯ ಪಿಸಿಪಿಬಿ ಪದವಿ ಮಹಾವಿದ್ಯಾಲಯ, ಎಂಪಿ ಪ್ರಕಾಶ ಸ್ವತಂತ್ರ ಪದವಿ ಪೂರ್ವ ಕಾಲೇಜು, ಎಸ್‌ಇಸಿಟಿ ಸ್ನಾತಕೋತ್ತರ ಮಹಾವಿದ್ಯಾಲಯ, ಸೇವಾ ಸಮಾಜ ಕಾರ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಆಶ್ರಯದಲ್ಲಿ ಸಂವಿಧಾನ ಅಂಗೀಕಾರ ದಿನ ಆಚರಿಸಲಾಯಿತು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಉಪನ್ಯಾಸಕ ನಾಗವೇಣಿ ಡಿ, ಎಂಪಿ ಪ್ರಕಾಶ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಆರ್. ಮಲ್ಲನಗೌಡ ಮಾತನಾಡಿದರು.

ಪಿಸಿಪಿಬಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಜಿ. ಮಾರುತಿ ಅಧ್ಯಕ್ಷತೆ ವಹಿಸಿದ್ದರು.

ಪರಶುರಾಮ ಕುರುಡಿ, ಹನುಮಂತ ಹೊಸಪೇಟೆ ಉಪಸ್ಥಿತರಿದ್ದರು. ಸುಪ್ರಿಯಾ ಕುಲಕರ್ಣಿ ಉಪಸ್ಥಿತರಿದ್ದರು. ತಿಮ್ಮಪ್ಪ ಅಸ್ಕಿಹಾಳ ಸ್ವಾಗತಿಸಿದರು. ರೇಖಾ ಬಡಿಗೇರ ನಿರೂಪಿಸಿದರು. ನಿಂಗಮ್ಮ ವಂದಿಸಿದರು.

ತಾರಾನಾಥ ಶಿಕ್ಷಣ ಸಂಸ್ಥೆ: ಚನ್ನಬಸಮ್ಮ ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಭಾರತದ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು.

ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ, ಉಪನ್ಯಾಸಕರಾದ ಮಹೇಶ, ಸಲ್ಮಾಬಾನು, ವಿದ್ಯಾಶ್ರೀ, ರಾಘಮ್ಮ, ಅನ್ನಪೂರ್ಣ, ಗೋವಿಂದರಾಜು, ವಾಹೀದಾ ಬೇಗಂ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.