ADVERTISEMENT

ಒಣಮೆಣಸಿನಕಾಯಿ ಖರೀದಿ ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 15:29 IST
Last Updated 13 ಜೂನ್ 2025, 15:29 IST
ಒಣಮೆಣಸಿನಕಾಯಿ
ಒಣಮೆಣಸಿನಕಾಯಿ   

ರಾಯಚೂರು: ಇಲ್ಲಿನ ಕೃಷಿ ಮಾರಾಟ ಇಲಾಖೆ 2024-25ನೇ ಸಾಲಿನ ಮಾರುಕಟ್ಟೆ ಮಧ್ಯೆ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ ಯೋಜನೆಯ ಅಡಿಯಲ್ಲಿ ಒಣಮೆಣಸಿನಕಾಯಿ ಖರೀದಿಸಲು ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ರೈತರ ನೋಂದಣಿ ಕಾಲಾವಧಿಯನ್ನು 15 ದಿನಗಳವರೆಗೆ ಮಾತ್ರ ನಿಗದಿಪಡಿಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.

ಪ್ರತಿ ಕ್ವಿಂಟಲಿಗೆ ₹10,589 ದರದಂತೆ ಒಣಮೆಣಸಿನಕಾಯಿ ಖರೀದಿಸಲಾಗುವುದು. ಈ ಯೋಜನೆಯ ಅನುಷ್ಠಾನ ಅವಧಿಯು ಯುನಿಫೈಡ್ ಮಾರ್ಕೇಟ್ ಪ್ಲಾಟಪಾರ್ಮ್‌ನ ತಂತ್ರಾಂಶದಲ್ಲಿ ದಾಖಲಿಸಬೇಕು. ಒಂದು ತಿಂಗಳ ಅವಧಿಯವರೆಗೆ ಮಾತ್ರ ಈ ಯೋಜನೆ ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯಡಿ ಪ್ರತಿ ಎಕರೆಗೆ 15 ಕ್ವಿಂಟಾಲ್ ಇಳುವರಿಯಂತೆ ಪ್ರತಿ ರೈತರಿಂದ ಗರಿಷ್ಟ 30 ಕ್ವಿಂಟಲ್‌ಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತ ನೀಡಲಾಗುವುದು.

ADVERTISEMENT

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಈ ಯೋಜನೆಯಡಿಯಲ್ಲಿ ಮಾರಾಟ ಮಾಡಲು ಬರುವ ರೈತರ ನೋಂದಣಿ ಕಾರ್ಯವನ್ನು ಎನ್‌ಇಎಂಎಲ್ ತಂತ್ರಾಂಶದಲ್ಲಿ ಮಾಡಿ ನಂತರ ಒಣಮೆಣಸಿನಕಾಯಿ ಉತ್ಪನ್ನದ ಗೇಟ್ ಎಂಟ್ರಿಯನ್ನು ಯುಎಂಪಿ ತಂತ್ರಾಶದಡಿಯಲ್ಲಿ ದಾಖಲಿಸುವ ಕಾರ್ಯವನ್ನು ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಕಡ್ಡಾಯವಾಗಿ ನಿರ್ವಹಿಬೇಕು ಎಂದು ತಿಳಿಸಲಾಗಿದೆ.

ರೈತರು ಆಧಾರ್ ಕಾರ್ಡ್, ಪಹಣಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿ ಒಣಮೆಣಸಿನಕಾಯಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.