ADVERTISEMENT

ಹಟ್ಟಿ ಚಿನ್ನದ ಗಣಿ: ರಸ್ತೆ ಬಂದ್‌ ಮಾಡಿದ ಅರಣ್ಯ ಇಲಾಖೆ

ಜನರೇ ನಿರ್ಮಿಸಿಕೊಂಡಿದ್ದ ದಾರಿ, ಪಿರಗಾರ ದೊಡ್ಡಿ ಜನರಿಗೆ ಸಂಕಷ್ಟ

ಅಮರೇಶ ನಾಯಕ
Published 11 ಆಗಸ್ಟ್ 2025, 4:51 IST
Last Updated 11 ಆಗಸ್ಟ್ 2025, 4:51 IST
ಹಟ್ಟಿ ಚಿನ್ನದ ಗಣಿ ಸಮೀಪದ ಪಿರಗಾರ ದೊಡ್ಡಿಯ ರಸ್ತೆಯನ್ನು ಅರಣ್ಯ ಅಧಿಕಾರಿಗಳು ಬಂದ್ ಮಾಡಿದ್ದಾರೆ
ಹಟ್ಟಿ ಚಿನ್ನದ ಗಣಿ ಸಮೀಪದ ಪಿರಗಾರ ದೊಡ್ಡಿಯ ರಸ್ತೆಯನ್ನು ಅರಣ್ಯ ಅಧಿಕಾರಿಗಳು ಬಂದ್ ಮಾಡಿದ್ದಾರೆ   

ಹಟ್ಟಿ ಚಿನ್ನದ ಗಣಿ: ಸಮೀಪದ ಪೈದೊಡ್ಡಿ ಗ್ರಾ.ಪಂ ವ್ಯಾಪ್ತಿಯ ರಾಯದುರ್ಗಾ ಗ್ರಾಮದ ಹತ್ತಿರ ಇರುವ ಪಿರಗಾರ ದೊಡ್ಡಿಯ ರಸ್ತೆಯನ್ನು ಅರಣ್ಯ ಅಧಿಕಾರಿಗಳು ಬಂದ್‌ ಮಾಡಿ ರೈತರ ಮೇಲೆ ದರ್ಪ ತೋರಿದ್ದಾರೆ.

ಪಿರಗಾರ ದೊಡ್ಡಿಯಲ್ಲಿ 40ಕ್ಕೂ ಅಧಿಕ ಕುಟುಂಬಗಳಿವೆ. ತಮ್ಮ ನಿತ್ಯ ಕೆಲಸಕ್ಕೆ ಇದೇ ರಸ್ತೆಯನ್ನು ಅವಲಂಬಿಸಿವೆ. 

ದೊಡ್ಡಿಗೆ ರಸ್ತೆ ಇಲ್ಲದ‌ ಕಾರಣ ಅರಣ್ಯ ಪ್ರದೇಶದಲ್ಲಿ ಇಲ್ಲಿನ‌ ಜನರು ಸ್ವಂತ ಹಣದಿಂದ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಬಂದ್ ಮಾಡಿದ್ದಾರೆ. ‌

ADVERTISEMENT

‌ಪಿರಗಾರ ದೊಡ್ಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಧೆ ಇಲ್ಲ, ವಿದ್ಯುತ್ ಪೂರೈಕೆ ಇಂದಿಗೂ ಮರೀಚಿಕೆಯಾಗಿದೆ. ದೊಡ್ಡಿಯಲ್ಲಿ ಅಂಗನವಾಡಿ ಕೇಂದ್ರ ಇಲ್ಲ, ಆರೋಗ್ಯ ಸೇವೆಯಿಂದ ವಂಚಿತರಾಗಿದ್ದೇವೆ ಎನ್ನುತ್ತಾರೆ ಇಲ್ಲಿನ ಜನ.

ನಿತ್ಯ ವಿದ್ಯಾರ್ಥಿಗಳು, ರೈತರು ಈ ರಸ್ತೆಯ ಮೂಲಕ ನಡೆದುಕೊಂಡೇ ಶಾಲೆ, ಹೊಲಗಳಿಗೆ ಹೋಗಬೇಕು. ಹಲವು ಸಲ ಅಧಿಕಾರಿ, ಜನಪ್ರತಿನಿಧಿಗಳಿಗೆ, ಗ್ರಾ.ಪಂ ಸದಸ್ಯರಿಗೆ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಕೋರಿದರೂ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ದೊಡ್ಡಿ ನಿವಾಸಿಗಳ ಅಳಲು. 

‌ವಿದ್ಯುತ್‌ ವ್ಯವಸ್ಥೆ ಇಲ್ಲದ್ದರಿಂದ ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆಯಾಗುತ್ತಿದೆ. ರಾತ್ರಿ ಸಮಯದಲ್ಲಿ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು‌ ಹೋಗಬೇಕಾದರೆ ಹೆಗಲ ಮೇಲೆ ಹೊತ್ತುಕೊಂಡೇ ಹೋಗಬೇಕು. ರಸ್ಯೆ ಮಧ್ಯೆ ಪ್ರಾಣ ಹೋದರೂ ಆಶ್ವರ್ಯವಿಲ್ಲ. ಇಲ್ಲಿನ ಜನರ ಜೀವಕ್ಕೆ ಅರಣ್ಯ ಅಧಿಕಾರಿಗಳು ಬೆಲೆಯನ್ನೇ ಕೊಡುತ್ತಿಲ್ಲ‌ ಎನ್ನುವುದು ಇಲ್ಲಿನ ಜನರ ವಾದ.

ಸ್ವಂತ ಹಣದಿಂದ ನಿರ್ಮಿಸಿಕೊಂಡ ರಸ್ತೆಯನ್ನು ಕೂಡ ಅರಣ್ಯ ಅಧಿಕಾರಿಗಳು ಬಂದ್ ಮಾಡಿದ್ದಾರೆ.  ಸಮಸ್ಯೆಯನ್ನು ಸಂಬಂಪಟ್ಟ ಅಧಿಕಾರಿಗಳು ಬಗೆಹರಿಸಲಿ ಎಂದು ಇಲ್ಲಿನ ಜನರು‌ ಕಾದು ಕುಳಿತಿದ್ದಾರೆ.

ಗುರುಗುಂಟಾ, ಪೈದೊಡ್ಡಿ, ರಾಯದುರ್ಗಾ ಗ್ರಾಮಕ್ಕೆ ಹೋಗಬೇಕಾದರೆ ಸುತ್ತಾಡಿಕೊಂಡು ಕಾಲು ದಾರಿ ಮೂಲಕ ಹೊಗಬೇಕು. ಈ‌ ರಸ್ತೆ‌ ಇಲ್ಲಿನ ಜನರಿಗೆ ಅನುಕೂಲವಾಗಲಿದೆ. ನಮ್ಮ ಕಷ್ಟ ಕೇಳುವವರೇ ಇಲ್ಲ ಎಂದು ಗ್ರಾಮಸ್ಧೆ ಚನ್ನಮ್ಮ ಹೇಳಿದರು. 

ತಾಲ್ಲೂಕು ಆಡಳಿತ‌ ಹಾಗೂ ಅರಣ್ಯ ಇಲಾಖೆಯ ಮೇಲಧಿಕಾರಿಗಳು ಇಲ್ಲಿನ ಜನರಿಗೆ ರಸ್ತೆಯ ಮೂಲಕ ಸಂಚಾರಕ್ಕೆ ಅನವು ಮಾಡಿಕೊಡಬೇಕು ಎನ್ನುವುದು ಇಲ್ಲಿನ ಜನ ಆಗ್ರಹ.

ಅಕ್ರಮವಾಗಿ ಅರಣ್ಯ ಜಾಗದಲ್ಲಿ ರಸ್ತೆ

ಉಳಿಮೆ ಮಾಡುತ್ತಿದ್ದಾರೆ. ಅಲ್ಲಿನ ರೈತರ ಹತ್ತಿರ ದಾಖಲೆಗಳೇ ಇಲ್ಲ ದಾಖಲೆ ನೀಡಿ ಎಂದು ನೋಟಿಸ್ ನೀಡಲಾಗಿದ್ದು ಉತ್ತರ ಬಂದಿಲ್ಲ. ಅಕ್ರಮವಾಗಿ ಉಳುಮೆ ಮಾಡುತ್ತಿದ್ದು ಇದು ಕೂಡ ಕಾನೂನು ಬಾಹಿರವಾಗಿದೆ. ಮುಂದಿನ ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳಾಲಾಗುವುದು ‌ವಿದ್ಯಾ ಶ್ರೀ ಲಿಂಗಸುಗೂರು ವಲಯ ಅರಣ್ಯಾಧಿಕಾರಿ ಅರಣ್ಯ ಅಧಿಕಾರಿಗಳು ಬಡವರ ಮೇಲೆ ದರ್ಪ ತೊರುತ್ತಿದ್ದಾರೆ. ಅವರ ವಿರುದ್ಧ ಹೋರಾಟ ನಿಲ್ಲದು  ಚನ್ನಮ್ಮ ಸ್ಥಳೀಯ ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.