ADVERTISEMENT

ದೇವಸ್ಥಾನಕ್ಕೆ 5 ಕೆ.ಜಿ. ಬೆಳ್ಳಿ ಮೂರ್ತಿ ನೀಡಿದ ಬಿ.ವಿ.ನಾಯಕ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 14:39 IST
Last Updated 4 ಜೂನ್ 2025, 14:39 IST
ಅರಕೇರಾ ಪಟ್ಟಣದ ಭಗಮ್ಮ ದೇವಿ ದೇವಸ್ಥಾನಕ್ಕೆ ಮಾಜಿ ಸಂಸದ ಬಿ.ವಿ. ನಾಯಕ ಮತ್ತು ಸಹೋದರ ರಾಜಶೇಖರ ನಾಯಕ 5 ಕೆ.ಜಿ.ಯ ಬೆಳ್ಳಿ ಮೂರ್ತಿಯನ್ನು ದೇಣಿಗೆ ನೀಡಿದರು
ಅರಕೇರಾ ಪಟ್ಟಣದ ಭಗಮ್ಮ ದೇವಿ ದೇವಸ್ಥಾನಕ್ಕೆ ಮಾಜಿ ಸಂಸದ ಬಿ.ವಿ. ನಾಯಕ ಮತ್ತು ಸಹೋದರ ರಾಜಶೇಖರ ನಾಯಕ 5 ಕೆ.ಜಿ.ಯ ಬೆಳ್ಳಿ ಮೂರ್ತಿಯನ್ನು ದೇಣಿಗೆ ನೀಡಿದರು   

ಅರಕೇರಾ (ದೇವದುರ್ಗ): ಪಟ್ಟಣದಲ್ಲಿ 13 ವರ್ಷದ ನಂತರ ನಡೆಯುತ್ತಿರುವ ಭಾಗಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಎ.ವೆಂಕಟೇಶ ನಾಯಕ ಫೌಂಡೇಶನ್‌ ವತಿಯಿಂದ 5 ಕೆ.ಜಿ.ಯ ಬೆಳ್ಳಿಯ ಭಾಗಮ್ಮ ದೇವಿ ಮೂರ್ತಿಯನ್ನು ಮಾಜಿ ಸಂಸದ ಬಿ.ವಿ. ನಾಯಕ ಮತ್ತು ಸಹೋದರ ರಾಜಶೇಖರ ನಾಯಕ ಕುಟುಂಬದ ಸದಸ್ಯರು ದೇವಸ್ಥಾನದ ಅರ್ಚಕರಿಗೆ ಹಸ್ತಾಂತರಿಸಿದರು.

ವಿವಿಧ ಧಾರ್ಮಿಕ ಪೂಜೆ ಮತ್ತು ಅಭಿಷೇಕದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಹಿರಿಯ ಮುಖಂಡರ ಸಮ್ಮುಖದಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.

ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ಪ್ರಹ್ಲಾದ ಜೋಷಿ, ಸತ್ಯನಾರಾಯಣ ನಾಯಕ, ತಿಮ್ಮಪ್ಪ ನಾಯಕ, ಕೆ.ಅನಂತರಾಜ ನಾಯಕ, ಸೀತಣ್ಣ ನಾಯಕ ಗುರಿಕಾರ, ವೆಂಕಟೇಶ ನಾಯಕ ದೊರೆ, ಬಸವರಾಜ ಪೂಜಾರಿ, ಸಿದ್ಧಾರ್ಥ ಹವಾಲ್ದಾರ್‌, ಬಸವರಾಜ ನಾಯಕ, ಶೇಖರಪ್ಪ ಗೌಡ, ವರದರಾಜ ತೆಗ್ಗಿಹಾಳ, ಗೋಪಿಕೃಷ್ಣ ಗುರುವಿನ, ರಾಚಯ್ಯ ಸ್ವಾಮಿ ಮಠಪತಿ, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.