ADVERTISEMENT

ಸಿಂಧನೂರು: ಹೆಣ್ಣು ಮಗುವಿಗೆ ₹10 ಸಾವಿರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:12 IST
Last Updated 29 ಜುಲೈ 2025, 5:12 IST
<div class="paragraphs"><p>ಮಗು (ಪ್ರಾತಿನಿಧಿಕ ಚಿತ್ರ)</p></div>

ಮಗು (ಪ್ರಾತಿನಿಧಿಕ ಚಿತ್ರ)

   

ಸಿಂಧನೂರು: ಹೆಣ್ಣುಮಗುವಿನ ಭವಿಷ್ಯದ ಶಿಕ್ಷಣ ಮತ್ತು ಆರ್ಥಿಕ ಭದ್ರತೆಯ ಉದ್ದೇಶದಿಂದ ನಗರದ ಉಮಾಶಂಕರ ಫೌಂಡೇಶನ್‍ನಿಂದ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣುಮಗುವಿಗೆ ವಿಶೇಷ ಉಳಿತಾಯದ ‘ಮೇಧಾಶ್ರೀ ಭವಿಷ್ಯ’ ನಿಧಿ ಯೋಜನೆಯಡಿಯಲ್ಲಿ ₹10 ಸಾವಿರ ಮುದ್ದತ್ ಠೇವಣಿ ಇಡಲು ತೀರ್ಮಾನಿಸಿರುವುದಾಗಿ ಫೌಂಡೇಶನ್ ಅಧ್ಯಕ್ಷ ಎಸ್.ಎಸ್.ಹಿರೇಮಠ ಮತ್ತು ಕಾರ್ಯದರ್ಶಿ ಶಿವಕುಮಾರ ಹಿರೇಮಠ ತಿಳಿಸಿದ್ದಾರೆ.

ಭಾನುವಾರ ಹೇಳಿಕೆ ನೀಡಿರುವ ಅವರು, ‘ವಾಣಿಜ್ಯೋದ್ಯಮಿ ರಾಜೇಶ್ ಹಿರೇಮಠ ಅವರ ಜನ್ಮದಿನ ಜು.27ರಂದು ಇದ್ದು, ಅಂದು ಜನಿಸಿದ ಹೆಣ್ಣುಮಗುವಿಗೆ ಮಾತ್ರ ಈ ಠೇವಣಿ ಅನ್ವಯಿಸುತ್ತಿದೆ. ಸ್ತ್ರೀ ಸಬಲೀಕರಣ, ಸ್ತ್ರೀ ಪಾರಮ್ಯವನ್ನು ಹೆಚ್ಚಿಸುವ ಪ್ರಾಥಮಿಕ ಗುರಿಯೊಂದಿಗೆ ರಾಜೇಶ್‌ ಹಿರೇಮಠ ಅವರು ಕಟ್ಟಿಕೊಂಡಿರುವ ಕನಸುಗಳನ್ನು ನನಸು ಮಾಡಲು ಅವರ ಜನ್ಮದಿನದ ಅಂಗವಾಗಿ ಈ ಯೋಜನೆ ರೂಪಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.