ಮುದಗಲ್: ಪಟ್ಟಣದ ವೆಂಕಟರಾಯನ ಪೇಟೆಯಲ್ಲಿರುವ ಗೋಸಲರಾಯನ ಜಾತ್ರಾ ಮಹೋತ್ಸವ ಶುಕ್ರವಾರ ಜರುಗಿತು.
ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನದಲ್ಲಿ ತಿಂಗಳಿಂದ ಶಿವ ಭಜನೆ ಜರುಗಿತು. ಜಾತ್ರೆ ನಿಮಿತ್ತ ಗೋಸಲರಾಯನ ಮೂರ್ತಿಗೆ ಬೆಳಗಿನ ಜಾವ ರುದ್ರಾಭಿಷೇಕ, ಎಲೆಚೆಟ್ಟು ಸೇವೆ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಅಲಂಕೃತ ವಾಹನದಲ್ಲಿ ಗೋಸಲರಾಯ (ಆಂಜನೇಯ)ನ ಭಾವಚಿತ್ರ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ 251 ಪೂರ್ಣ ಕುಂಭಗಳನ್ನು ಹೊತ್ತು ಮಹಿಳೆಯರು ಸಾಗಿದರು.
ಯುವಕರು ಡೊಳ್ಳು ಕುಣಿತ ಮತ್ತು ಮಾರುತೇಶ್ವರ ಪದಗಳಿಗೆ ನರ್ತಿಸಿದರು. ಮಹಿಳೆಯರು, ಮಕ್ಕಳು ಗೋಸಲರಾಯನ ಪರ ಜಯಘೋಷ ಮಾಡಿದರು. ಪುರಸಭೆ ಸದಸ್ಯೆ ಮಹಾಲಕ್ಷ್ಮಿ ಕರಿಯಪ್ಪ ಯಾದವ ಮೆರವಣಿಗೆಗೆ ಚಾಲನೆ ನೀಡಿದರು.
ಪಿ.ಎಸ್.ಐ ವೆಂಕಟೇಶ ಮಾಡಗೇರಿ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಕರಿಯಪ್ಪ ಯಾದವ, ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ರಾಮು ಯಾದವ, ನಾಗರಾಜ ಪೇಂಟರ್, ಬಸವರಾಜ, ವೆಂಕೋಬ ಮುದಗಲ್ ಹಾಗೂ ನಾಗರಾಜ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.