ADVERTISEMENT

ಹಾಲುಮತ ಸಂಸ್ಕೃತಿ‌ ಸರಳ ಕಾರ್ಯಕ್ರಮ: ಧ್ವಜಾರೋಹಣದೊಂದಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 7:39 IST
Last Updated 12 ಜನವರಿ 2022, 7:39 IST
ಹಾಲುಮತ ಸಂಸ್ಕೃತಿ‌ ಸರಳ ಕಾರ್ಯಕ್ರಮ: ಧ್ವಜಾರೋಹಣದೊಂದಿಗೆ ಆರಂಭ
ಹಾಲುಮತ ಸಂಸ್ಕೃತಿ‌ ಸರಳ ಕಾರ್ಯಕ್ರಮ: ಧ್ವಜಾರೋಹಣದೊಂದಿಗೆ ಆರಂಭ   

ಜಾಲಹಳ್ಳಿ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಸಮೀಪದ ಕನಕಗುರು ಪೀಠ ಹಾಲುಮತ ಕೇಂದ್ರದಲ್ಲಿ ಹಾಲುಮತ ಸಂಸ್ಕೃತಿ ವೈಭವದ ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ಬುಧವಾರ ಆರಂಭಿಸಲಾಯಿತು.

ಕುರುಬ ಸಮಾಜಕ್ಕೆ ಎಸ್ ಟಿ ಮೀಸಲು ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಪೀಠದ ಮುಖ್ಯಸ್ಥ ಸಿದ್ದರಾಮಾನಂದ ಪುರಿ ಸ್ವಾಮಿ ಹಾಗೂ ಕೆ.ಆರ್.ನಗರ ಕನಕಗುರು ಪೀಠದ ಮುಖ್ಯಸ್ಥ ಶಿವಾನಂದ ಮಹಾಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮಗಳು ಆರಂಭವಾಗಿವೆ.

ADVERTISEMENT

ಕೋವಿಡ್ ಮೂರನೇ ಅಲೆ ವ್ಯಾಪಿಸುತ್ತಿರುವುದರಿಂದ ಆಹ್ವಾನಿತ ರಾಜಕೀಯ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಮೊದಲು ಕಾಣುತ್ತಿದ್ದ ಜನದಟ್ಟಣೆ ಕೂಡಾ ಇಲ್ಲ. ಜನವರಿ 14 ರ ವರೆಗೂ ಕಾರ್ಯಕ್ರಮಗಳೆಲ್ಲ ಸರಳವಾಗಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.