ಹಟ್ಟಿ ಚಿನ್ನದ ಗಣಿ: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಅನುಕೂಲವಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಮಾನಪ್ಪ ಡಿ.ವಜ್ಜಲ್ ಹೇಳಿದರು.
ಪಟ್ಟಣದ 3ನೇ ವಾರ್ಡ್‌ನಲ್ಲಿ ನಿರ್ಮಾಣವಾದ ನೂತನ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಶನಿವಾರ ಉದ್ಘಾಟನೆ ಮಾಡಿ ನಂತರ ಅವರು ಮಾತನಾಡಿದರು.
‘ಹಟ್ಟಿ ಪಟ್ಟಣ ಅಲ್ಲದೆ ಆನ್ವರಿ, ಗೆಜ್ಜಲಗಟ್ಟಾ, ಗುರುಗುಂಟಾ ಗ್ರಾಮಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.
‘ಟೆಂಡರ್ ಪಡೆದ ಗುತ್ತಿಗೆದಾರ ಜನರಿಗೆ ಗುಣಮಟ್ಟದ ಆಹಾರ ಒದಗಿಸಬೇಕು. ದೂರುಗಳು ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅನುದಾನ ಹಂಚಿಕೆ ಮಾಡುವಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಸರ್ಕಾರ ಜನಪರವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.
ಈ ವೇಳೆ ಗಣಿ ಕಂಪನಿ ಅಧಿಕಾರಿ ಉಪವ್ಯವಸ್ಧಾಪಕ (ಮಾಸ) ಸುರೇಶ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂಡಿ ಸಂಧಾನಿ, ಉಪಾಧ್ಯಕ್ಷೆ ನಾಗರತ್ನ ಗುರಿಕಾರ, ಪಪಂ ಮುಖ್ಯಾಧಿಕಾರಿ ಜಗನಾಥ, ಪಿಐ ಹೋಸಕೇರಪ್ಪ, ಗ್ರಾಪಂ ಸದಸ್ಯರಾದ ಇಸ್ಮಾಯಿಲ್ ಖಾದ್ರಿ, ಸಿರಾಜುದ್ದಿನ್, ಮುಖಂಡರಾದ ಶಂಕರಗೌಡ ಬಳಗಾನೂರ, ಎನ್.ಸ್ವಾಮಿ, ಹನುಮಂತರೆಡ್ಡಿ, ಪರಮೇಶ ಯಾದವ, ಪಪಂ ಮಾಜಿ ಸದಸ್ಯ ಶಿವಪ್ರಸಾದ, ರಮೇಶ ಉಳಿಮೇಶ್ವರ, ಬಸವರಾಜ ಪೈ., ಗೋವಿಂದ ನಾಯಕ, ಚಂದ್ರಶೇಖರ, ರಾಜಪ್ಪ, ಅಕ್ರಮ್ ಉಪಸ್ಧಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.