ADVERTISEMENT

ಪತ್ರಿಕಾ ವಿತರಕರಿಗೆ ಗುರುತಿನ ಚೀಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:17 IST
Last Updated 1 ಏಪ್ರಿಲ್ 2020, 14:17 IST
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣದ ಎದುರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ದಿನಪತ್ರಿಕೆ ವಿತರಕರಿಗೆ ಬುಧವಾರ ಬೆಳಿಗ್ಗೆ ಗುರುತಿನ ಚೀಟಿ, ಕೈ ಗವುಸು, ಮುಖಗವುಸುಗಳನ್ನು ವಿತರಿಸಿದರು
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣದ ಎದುರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ದಿನಪತ್ರಿಕೆ ವಿತರಕರಿಗೆ ಬುಧವಾರ ಬೆಳಿಗ್ಗೆ ಗುರುತಿನ ಚೀಟಿ, ಕೈ ಗವುಸು, ಮುಖಗವುಸುಗಳನ್ನು ವಿತರಿಸಿದರು   

ರಾಯಚೂರು: ನಗರದಲ್ಲಿ ಪತ್ರಿಕೆಗಳನ್ನು ವಿತರಣೆ ಮಾಡುವವರಿಗೆ ಮತ್ತು ಹಾಕರ್ಸ್‌ಗಳಿಗೆ ಜಿಲ್ಲಾಡಳಿತದಿಂದ ಕೇಂದ್ರ ಬಸ್ ನಿಲ್ದಾಣ ಎದುರು ಬುಧವಾರ ಗುರುತಿನ‌ ಚೀಟಿಗಳನ್ನು ವಿತರಿಸಲಾಯಿತು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಕೈ ಗವುಸು ವಿತರಿಸಿದರು. ಹಮ್‌ರಾಜ್ ಟೈಲರ್ ಅವರಿಂದ ಉಚಿತವಾಗಿ ಮುಖಗವುಸು ವಿತರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಸಾಂಕೇತಿಕವಾಗಿ ಕೆಲವರಿಗೆ ಮುಖಗವುಸು, ಕೈಗವುಸು ವಿತರಿಸಿ,ಪತ್ರಿಕಾ ವಿತರಕರು ಅನುಸರಿಸಬೇಕಾದ ನಿಯಮಗಳನ್ನು ಮನವರಿಕೆ ಮಾಡಿದರು. ಬೆಳಿಗ್ಗೆ 5 ರಿಂದ 10 ಗಂಟೆಯೊಳಗಾಗಿ ಪತ್ರಿಕಾ ವಿತರಣೆ ಮುಗಿಸಿಕೊಂಡು ಮನೆಗೆ ವಾಪಸಾಗಬೇಕು ಎಂದರು.
ಒಟ್ಟು 125 ಗುರುತಿನ ಚೀಟಿ ನೀಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿವಳಿಕೆ ನೀಡಲಾಯಿತು.

ADVERTISEMENT

ವಾರ್ತಾ ಇಲಾಖೆಯ ಹಿರಿಯ ಉಪನಿರ್ದೇಶಕ ರವಿರಾಜ, ಪತ್ರಿಕಾ ಏಜೆಂಟ್‌ರಾದ ಬಸಪ್ಪ ಹಳ್ಳಿ, ಮುನಿರೆಡ್ಡಿ, ಚಂದ್ರು, ಮಲ್ಲೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.