ಮುದಗಲ್: ಅಪರಾಧ ತಡೆಯಲು ಸಿಸಿಟಿವಿ ಅಳವಡಿಸಿಕೊಳ್ಳಿ ಎಂದು ಪಿಎಸ್‌ಐ ವೆಂಕಟೇಶ ಮಾಡಗೇರಿ ಹೇಳಿದರು.
ಪೊಲೀಸ್ ಠಾಣೆಯಲ್ಲಿ ವಿವಿಧ ಅಂಗಡಿಗಳ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು,
ತಮ್ಮ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸಿದರೆ ಮುಖ್ಯ ರಸ್ತೆಯಲ್ಲಿನ ಚಲನವಲನ ಕಾಣುತ್ತದೆ. ಗುಣಮಟ್ಟದ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಬಂಗಾರದ ಹಾಗೂ ಪೆಟ್ರೋಲ್ ಬಂಕ್ ಸೇರಿದಂತೆ ಇತರೆಡೆ ತಿಂಗಳು ದೃಶ್ಯಾವಳಿ ಸಂಗ್ರಹವಾಗುವ ಸಾಮರ್ಥ್ಯ ಇರಬೇಕು. ಮುಖ್ಯ ರಸ್ತೆಯ ಸಂಪರ್ಕ ಇರುವ ಹಾಗೆ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದರು.
ವ್ಯಾಪಾರಸ್ಥರಾದ ವರ್ಮಾ ಶೇಠ, ಕಾಂತ ಕುಮಾರ ಪತ್ತಾರ, ಶ್ರೀಧರ ಪತ್ತಾರ, ಆನಂದ ಮುದಗಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.