
ಜಾಲಹಳ್ಳಿ: ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಶಾಲಾ ಶಿಕ್ಷಣ ಇಲಾಖೆ ಹಾಗೂ ಟಾಟಾ ಇನ್ಸ್‌ಟ್ರಕ್ ಟೆನ್ ಸರ್ವಿಸಸ್‌ನ ಸಹಯೋಗದೊಂದಿಗೆ ಹಮ್ಮಿಕೊಂಡ ರಾಷ್ಟ್ರೀಯ ಟಿ.ಸಿ.ಎಸ್ ಗ್ರಾಮೀಣ ಐ.ಟಿ ರಸಪ್ರಶ್ನೆ 2025ರ ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೇಯಾ ರುದ್ರೇಶ್ ಹಾಗೂ ಅನಿತಾ ಕ್ಯಾತರಿಗೌಡ ಮತ್ತು ಸಂಜನಾ ಅಶೋಕ್ ರೆಡ್ಡಿ ಸಾಧನೆ ಮಾಡಿದ್ದಾರೆ.
ಪ್ರತಿ ತಾಲ್ಲೂಕಿನಿಂದ ಮೂರು ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಜಿಲ್ಲೆಯಿಂದ ಒಟ್ಟು 45 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಥಮ ಸ್ಥಾನ ಪಡೆದ ತಂಡ ಧಾರವಾಡ ನಗರದಲ್ಲಿ ನಡೆಯುವ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಎಂದು ವಸತಿ ಶಾಲೆಯ ಪ್ರಾಂಶುಪಾಲ ಸೋಮಶೇಖರ ಪಾಟೀಲ ಬಾಗೂರು ಪತ್ರಿಕೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.