ADVERTISEMENT

ಶಕ್ತಿನಗರ: ಜೆಸಿಐ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:17 IST
Last Updated 13 ಜನವರಿ 2022, 12:17 IST
ಶಕ್ತಿನಗರದ ಬಸವಕಲ್ಯಾಣ ಮಂಟಪದಲ್ಲಿ ಸೋಮವಾರ ಜೆಸಿಐಯ 15ನೇ ಪದಗ್ರಹಣ ಸಮಾರಂಭದಲ್ಲಿ ನಿಕಟ ಪೂರ್ವಾಧ್ಯಕ್ಷೆ ರಂಜನಾ ಅವರು, ನೂತನ ಅಧ್ಯಕ್ಷ ರೂಪಾನಾಗೇಶ ಅವರಿಗೆ ಅಧಿಕಾರ ಹಸ್ತಾಂತರಿಸಿದರು
ಶಕ್ತಿನಗರದ ಬಸವಕಲ್ಯಾಣ ಮಂಟಪದಲ್ಲಿ ಸೋಮವಾರ ಜೆಸಿಐಯ 15ನೇ ಪದಗ್ರಹಣ ಸಮಾರಂಭದಲ್ಲಿ ನಿಕಟ ಪೂರ್ವಾಧ್ಯಕ್ಷೆ ರಂಜನಾ ಅವರು, ನೂತನ ಅಧ್ಯಕ್ಷ ರೂಪಾನಾಗೇಶ ಅವರಿಗೆ ಅಧಿಕಾರ ಹಸ್ತಾಂತರಿಸಿದರು   

ಶಕ್ತಿನಗರ: ಜೆಸಿಐ ಸಂಸ್ಥೆಯವರ ಅವಿರತವಾಗಿ ಸೇವೆಯ ಜೊತೆಗೆ ಸಮಾಜಸೇವೆಯೂ ಅತ್ಯವಶಕ್ಯ ಎಂದು ವೈಟಿಪಿಎಸ್‌ ಯೋಜನಾ ಮುಖ್ಯಸ್ಥ ಬಿ.ಟಿ.ಆಂಜನೇಯ ನಾಯಕ ಹೇಳಿದರು.

ಜೆಸಿಐ ಶಕ್ತಿನಗರದ ಪವರ್ ಸಿಟಿ ಸಹಯೋಗದಲ್ಲಿ ಇಲ್ಲಿನ ಬಸವ ಕಲ್ಯಾಣ ಮಂಟಪದಲ್ಲಿ ನಡೆದ 20202ನೇ ಸಾಲಿನ ಜೆಸಿಐಯ 15ನೇ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜ ಸೇವೆಯೊಂದಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳೆಸಿಕೊಳ್ಳಲು ಸಂಘಟನೆಗಳು ಪೂರಕ ವಾತಾವರಣ ಕಲ್ಪಿಸುತ್ತವೆ. ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಸೇವೆ ಮಾಡಬೇಕು. ಪರಸ್ಪರ ಹೊಂದಾಣಿಕೆಯಿಂದ ಬಡವರಿಗೆ ನೆರವಾಗಲು ಶ್ರಮಿಸಬೇಕು ಎಂದರು.

ADVERTISEMENT

ಪದಗ್ರಹಣ ಸಮಾರಂಭದಲ್ಲಿ ಜೆಸಿಐ ಶಕ್ತಿನಗರದ ಪವರ್ ಸಿಟಿ ನೂತನ ಅಧ್ಯಕ್ಷೆ ರೂಪಾನಾಗೇಶ ಅವರಿಗೆ ನಿರ್ಗಮಿತ ಅಧ್ಯಕ್ಷೆ ರಂಜನಾ ಅವರು ಅಧಿಕಾರ ಹಸ್ತಾಂತರಿಸಿದರು. 10 ನೂತನ ಮಹಿಳಾ ಸದಸ್ಯರು ಜೆಸಿಗೆ ಸೇರ್ಪಡೆಗೊಂಡರು.

ಜೆಸಿಐ 12ನೇ ವಲಯದ ಅಧ್ಯಕ್ಷ ಜೆಸಿ ರಮೇಶ್ ದಡಿಗಾಲ, ಉಪಾಧ್ಯಕ್ಷ ಜೆಸಿ ಗೋವಿಂದ್ ಕಂಕಾನಿ, ನಿಕಟಪೂರ್ವ ಅಧ್ಯಕ್ಷೆ ಜೆಸಿ ಶೀಲಾ ಮಂಜುನಾಥ್, ವಿ.ಕೆ.ಅಂಗಡಿ, ಗೌತಮ್ ಕುಮಾರ ಜೈನ್, ಸಾರಿಕಾ, ಮಲ್ಲಿಕಾರ್ಜುನ್ ಪಾಟೀಲ್, ಮಹೇಶ್ ಪೋಲೀಸ್ ಪಾಟೀಲ್, ಗುರುರಾಜ್, ಮಹದೇವ್, ಸವಿತಾ ಮುರಳಿಕೃಷ್ಣ, ಸಂಜನಾ ಪಾಟೀಲ್, ಅನುಷಾ ಪಿ ಹಾಗೂ ‍‍‍‍ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.