ADVERTISEMENT

‘ಭಾಷಾ ಪ್ರೀತಿಯಿಂದ ಕನ್ನಡ ಬೆಳವಣಿಗೆ’

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 7:15 IST
Last Updated 2 ನವೆಂಬರ್ 2021, 7:15 IST
ಸಿರವಾರದಲ್ಲಿ ಸೋಮವಾರ ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು
ಸಿರವಾರದಲ್ಲಿ ಸೋಮವಾರ ಕನ್ನಡ ಪರ ಸಂಘಟನೆಗಳಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು   

ಸಿರವಾರ: ‘ಮಾತೃಭಾಷೆ ಮೇಲೆ ಪ್ರತಿಯೊಬ್ಬರಿಗೂ ಪ್ರೀತಿ ಇರಬೇಕು. ಅಂದಾಗ ಮಾತ್ರ ಭಾಷೆ ಮೇಲೆ ಹಿಡಿತ ಸಾಧ್ಯವಾಗುತ್ತದೆ’ ಎಂದು ಮಾಜಿ ಸೈನಿಕ ವಿರುಪಾಕ್ಷಪ್ಪ ಸಾಹುಕಾರ ನಿಲಗಲ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹದಲ್ಲಿ ಮಾತೃಭಾಷೆಯನ್ನೇ ಮರೆಯುವಂತಾಗಿದೆ. ಸಣ್ಣ ಸಣ್ಣ ಶಬ್ದಗಳನ್ನು ಸಹ ಮರೆತಿದ್ದೇವೆ. ನಮ್ಮ ಭಾಷೆ ಮೇಲೆ ಹಿಡಿತವಿದ್ದರೆ ಬೇರೆ ಯಾವ ಭಾಷೆಯನ್ನಾದರೂ ಸಲೀಸಾಗಿ ಕಲಿಯಬಹುದು ಎಂದರು. ಭುವನೇಶ್ವರಿ ಭಾವಚಿತ್ರಕ್ಕೆ ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಮಾಲಾರ್ಪಣೆ ಮಾಡಿದರು.

ADVERTISEMENT

ತಾಲ್ಲೂಕು ಆಡಳಿತದಿಂದ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಧ್ವಜಾರೋಹಣ ನೆರವೇರಿಸಿದರು.

ಸಿಪಿಐ ಗುರುರಾಜ ಕಟ್ಟಿಮನಿ, ಚಂದ್ರು ಕಳಸ, ಟಿ.ಬಸವರಾಜ, ಜೆ.ದೇವರಾಜಗೌಡ, ಶಿವಶರಣಗೌಡ ಲಕ್ಕಂದಿನ್ನಿ, ಡಿ.ಯಮನೂರು, ಕೆ.ರಾಘವೇಂದ್ರ, ಸೂರಿ ದುರುಗಣ್ಣ, ಜ್ಞಾನಮಿತ್ರ, ವೆಂಕಟರೆಡ್ಡಿ ಬಲ್ಕಲ್, ಕೃಷ್ಣ ನಾಯಕ ಸೇರಿದಂತೆ ಶಾಲೆ ಶಿಕ್ಷಕರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.