ADVERTISEMENT

ಕವಿತಾಳ: ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಶೇ 73.22 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:20 IST
Last Updated 2 ಮೇ 2025, 14:20 IST

ಕವಿತಾಳ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 183 ವಿದ್ಯಾರ್ಥಿಗಳಲ್ಲಿ 134 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ 73.22 ಫಲಿತಾಂಶ ಲಭಿಸಿದೆ.

ದೀಪಾ ಬಾಲಪ್ಪ ನಾಯಕ ಶೇ 93.12, ಪೂಜಾ ಚನ್ನಬಸವ ಶೇ 91.84 ಮತ್ತು ಶ್ರೀದೇವಿ ಅಮರೇಶ ಶೇ 91.52 ಅಂಕ ಗಳಿಸಿದ್ದಾರೆ ಎಂದು ಮುಖ್ಯ ಶಿಕ್ಷಕಿ ಮಂಜುಳಾ ಅಂಗಡಿ ತಿಳಿಸಿದರು.

ಕರ್ನಾಟಕ ಪಬ್ಲಿಕ್ ಶಾಲಾ ವಿಭಾಗದ ಬಾಲಕರ ಸರ್ಕಾರಿ ಪ್ರೌಢಶಾಲೆಯ 122 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ 31.96 ಫಲಿತಾಂಶ ಲಭಿಸಿದೆ.

ADVERTISEMENT

ವಿದ್ಯಾರ್ಥಿಗಳಾದ ಶರಣಬಸವ ಯಲ್ಲಪ್ಪ ಶೇ. 86.72 (ಪ್ರಥಮ) ಶಿವಕುಮಾರ ನಾಗಪ್ಪ ಶೇ 79.68 (ದ್ವಿತೀಯ) ಮತ್ತು ಶ್ರವಣಕುಮಾರ ಅಯ್ಯನಗೌಡ ಶೇ. 79.52 (ತೃತೀಯ) ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.